ಬಾಡಿ ಶೇಮಿಂಗ್ ನ ವಿಡಿಯೋ ಒಂದು ವೈರಲ್ ಆಗಿದೆ. ಪಾಕಿಸ್ತಾನದ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಟಿಕೆಟ್ ಕಲೆಕ್ಟರ್ ಮಹಿಳೆ ದೇಹದ ಗಾತ್ರವನ್ನು ಟೀಕಿಸಿದ್ದಾನೆ. ರೈಲಿನಲ್ಲಿರುವ ಪ್ರಯಾಣಿಕ, ಇವಳು ನನ್ನ ಪತ್ನಿ ಎಂದು ಪರಿಚಯ ಮಾಡ್ತಾನೆ. ಆಗ ಟಿಕೆಟ್ ಕಲೆಕ್ಟರ್, ಇವರು ನಿಮಗೆ ಸೂಕ್ತವಲ್ಲ. ಇವರು ಹೆಚ್ಚು ಕೊಬ್ಬು ಹೊಂದಿದ್ದಾರೆಂದು ಕಮೆಂಟ್ ಪಾಸ್ ಮಾಡ್ತಾರೆ. ಇದನ್ನು ಕೇಳಿದ ಬ್ರಿಟಿಷ್ ಪ್ರಜೆ, ಹೀಗೆಲ್ಲ ಮಾತನಾಡುವುದು ಸೂಕ್ತವಲ್ಲ. ನಿಮ್ಮ ಮಾತಿನ ಅರ್ಥವೇನು, ನಿಮ್ಮ ಮಾತಿನಿಂದ ಪತ್ನಿಗೆ ಮುಜುಗರವಾಗಿದೆ ಎನ್ನುತ್ತಾನೆ.
ಇಬ್ಬರ ಮಧ್ಯೆ ನಡೆಯುವ ಈ ವಾದ – ವಿವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಘರ್ ಕಾ ಕಾಲೇಶ್’ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನನಗೆ ಆಕೆ ಸರಿ ಹೊಂದುವುದಿಲ್ಲ ಅಂದ್ರೆ ಅರ್ಥವೇನು ಎಂದು ಕೇಳುತ್ತಾನೆ. ಅದಕ್ಕೆ ಟಿಕೆಟ್ ಕಲೆಕ್ಟರ್, ಮಹಿಳೆ ನಿಮಗಿಂತ ಹೆಚ್ಚು ಕೊಬ್ಬು ಹೊಂದಿದ್ದಾರೆ ಎನ್ನುತ್ತಾರೆ. ಸ್ವಲ್ಪ ಸಮಯ ಇದ್ರ ಬಗ್ಗೆ ಚರ್ಚೆ ನಡೆಯುತ್ತದೆ.
ವಿಡಿಯೋ ಕೊನೆಯಲ್ಲಿ ಬ್ರಿಟಿಷ್ ಪ್ರಜೆ, ಟಿಕೆಟ್ ಕಲೆಕ್ಟರ್ ಗೆ ನೀವು ಈ ರೀತಿ ಮಾತನಾಡಬಾರದು. ಪ್ರವಾಸಿಗರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡುತ್ತಾನೆ. ಅದಕ್ಕೆ ಟಿಕೆಟ್ ಕಲೆಕ್ಟರ್ ತಲೆ ಆಡಿಸೋದನ್ನು ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಸಾಕಷ್ಟು ಕಮೆಂಟ್ ಮಾಡಿದ್ದಾರೆ.
https://twitter.com/gharkekalesh/status/1826267720633233437?ref_src=twsrc%5Etfw%7Ctwcamp%5Etweetembed%7Ctwterm%5E1826267720633233437%7Ctwgr%5Ea3e93699b5750871cec9b999aa2c54238028c944%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideoshamefulpakistanitrainticketcheckerfatshamesbritishtravellerswifehusbandtakeshimtotask-newsid-n627603533