ಉತ್ತರ ಪ್ರದೇಶದಲ್ಲಿ ಮತ್ತೊಂದು ನಾಚಿಕೆಗೇಡಿ ಕೆಲಸ ನಡೆದಿದೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಹಾಗೂ ಪುರುಷ ಎಸ್ಐ ನಡುವಿನ ಅಕ್ರಮ ಸಂಬಂಧವನ್ನು ಪುರುಷ ಎಸ್ಐ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದರ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ಅಂತವುದೇ ಮತ್ತೊಂದು ಪ್ರಕರಣ ನಡೆದಿದೆ.
ಈ ಹಿಂದಿನ ಘಟನೆ ಆಗ್ರಾದಲ್ಲಿ ನಡೆದಿದ್ದರೆ ಇದೀಗ ವೈರಲ್ ಆಗಿರುವ ವಿಡಿಯೋ ಪ್ರಕರಣವು ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋವನ್ನು ಸಚಿನ್ ಗುಪ್ತಾ ಎಂಬವರು ಆಗಸ್ಟ್ 16ರಂದು ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರು ಆರೋಪಿ ಪೊಲೀಸನಿಗೆ ಛೀಮಾರಿ ಹಾಕುತ್ತಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವಂತೆ ನರೇಶ್ ಕುಮಾರ್ ಎಂಬ ಪೊಲೀಸನ ಜೊತೆ ಆತನ ಮನೆಯಲ್ಲಿಯೇ ಮತ್ತೊಬ್ಬನ ಪತ್ನಿ ಇರುತ್ತಾಳೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಹಿಳೆಯ ಪತಿ, ನರೇಶ್ ಕುಮಾರ್ ನನ್ನು ಕೂಡಿ ಹಾಕಿದ್ದಾನೆ. ಜೊತೆಗೆ ತನ್ನ ಪತ್ನಿಗೂ ಸಹ ಬೈದಿದ್ದು, ಎಲ್ಲ ದೃಶ್ಯವನ್ನು ಮತ್ತೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇವರಿಬ್ಬರೂ ಇದ್ದ ಮನೆಯಲ್ಲಿ ಪೊಲೀಸ್ ಸಮವಸ್ತ್ರ ನೇತಾಕಿದ್ದು, ನರೇಶ್ ಕುಮಾರ್ ಮನೆಯೇ ಇರಬೇಕೆಂದು ತೋರುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನರೇಶ್ ಕುಮಾರ್ ನನ್ನು ಸಸ್ಪೆಂಡ್ ಮಾಡಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
https://twitter.com/SachinGuptaUP/status/1824334363707748470?ref_src=twsrc%5Etfw%7Ctwcamp%5Etweetembed%7Ctwterm%5E1824334363707748470%7Ctwgr%5E96ed23df27b141825f7c227c