ಯಶಸ್ವಿಯಾಗಿ ಶತಕ ಬಾರಿಸಿದ ‘ಶಕ್ತಿ ಯೋಜನೆ’: 100 ದಿನದಲ್ಲಿ 62 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿದ ಶಕ್ತಿ ಯೋಜನೆ ಯಶಸ್ವಿಯಾಗಿ 100 ದಿನ ಪೂರ್ಣಗೊಳಿಸಿದೆ.

ಜೂನ್ 11ರಂದು ಶಕ್ತಿ ಯೋಜನೆ ಆರಂಭವಾಗಿದ್ದು, 100 ದಿನದಲ್ಲಿ ರಾಜ್ಯ ಸಾರಿಗೆ ಬಸ್ ಗಳಲ್ಲಿ 62.55 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪ್ರಯಾಣ ದರದ ಮೊತ್ತ 1,456 ಕೋಟಿ ರೂ. ಆಗಿದೆ.

ಜೂನ್ 11 ರಿಂದ ಸೆಪ್ಟಂಬರ್ 19 ರವರೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತವಾಗಿ 62,55,39,727 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಕೆಎಸ್ಆರ್‌ಟಿಸಿ 18.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೊತ್ತ 541 ಕೋಟಿ ರೂ. ಆಗಿದೆ.

ಬಿಎಂಟಿಸಿಯಲ್ಲಿ 21 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೊತ್ತ 264 ಕೋಟಿ ರೂ. ಆಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ 8.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೊತ್ತ 282 ಕೋಟಿ ರೂಪಾಯಿ ಆಗಿದೆ.

NWKRTCಯಲ್ಲಿ 14.5 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೊತ್ತ 368 ಕೋಟಿ ರೂಪಾಯಿ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read