1000 ಕೋಟಿ ರೂಪಾಯಿ ಗಳಿಕೆಯತ್ತ ಶಾರುಖ್ ‘ಜವಾನ್’ ಸಿನಿಮಾ ದಾಪುಗಾಲು

Shah Rukh Khan's 'Jawan' crosses Rs 600 crore mark at global box office- The New Indian Express

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಗೆ ‘ಪಠಾಣ್’ ಮೊದಲ ಗೆಲುವು ತಂದು ಕೊಟ್ಟಿದ್ದು, ಇದೀಗ ‘ಜವಾನ್’ ಗಳಿಕೆಯಲ್ಲಿ ಆ ಚಿತ್ರವನ್ನೂ ಮೀರಿಸಿದೆ.

300 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ನಿರ್ಮಾಪಕರಿಗೆ ಈ ಬಂಡವಾಳವನ್ನು ವಾಪಸ್ ತಂದುಕೊಟ್ಟಿತ್ತು. ಅಲ್ಲದೆ ಅತಿ ವೇಗದಲ್ಲಿ 500 ಕೋಟಿ ರೂಪಾಯಿ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೂ ‘ಜವಾನ್’ ಪಾತ್ರವಾಗಿದ್ದು, ಈ ಚಿತ್ರದ ನಿರ್ಮಾಪಕಿ ಶಾರುಖ್ ಪತ್ನಿ ಗೌರಿ ಖಾನ್ ಎಂಬುದು ಗಮನಾರ್ಹ ಸಂಗತಿ.

ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್ ಗಳಿಕೆಯಲ್ಲಿ ಚಿಂದಿ ಉಡಾಯಿಸುತ್ತಿರುವ ‘ಜವಾನ್’, ‘ಪಠಾಣ್’ ಹಾಗೂ ‘ಗದಾರ್’ ದಾಖಲೆಗಳನ್ನು ಬ್ರೇಕ್ ಮಾಡಿದೆ. ಬಿಡುಗಡೆಗೊಂಡ 16ನೇ ದಿನಕ್ಕೆ ‘ಜವಾನ್’ ಸಿನಿಮಾದ ವಿಶ್ವದಾದ್ಯಂತದ ಕಲೆಕ್ಷನ್ 953 ಕೋಟಿ ರೂಪಾಯಿಗಳಾಗಿದ್ದು, ಸಾವಿರ ಕೋಟಿ ರೂಪಾಯಿ ಗಳಿಸುವ ಹೊಸ್ತಿಲಿನಲ್ಲಿದೆ. ಸದ್ಯದಲ್ಲೇ ಸರಣಿ ರಜೆ ಬರಲಿದ್ದು, ಚಿತ್ರದ ಗಳಿಕೆ ಮತ್ತಷ್ಟು ವೇಗವಾಗಿ ಏರುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read