ರಿ-ರಿಲೀಸ್ ಆದ ‘ಜಬ್ ವಿ ಮೆಟ್’ ಸೂಪರ್ ಹಿಟ್; ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ನಟ ಶಾಹಿದ್ ಕಪೂರ್

16 ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲಿ ‘ಜಬ್ ವಿ ಮೆಟ್’ ಕೂಡಾ ಒಂದು. ಇಂದಿಗೂ ಈ ಸಿನೆಮಾ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಸಿನೆಮಾದ ನಟರಾದ ಶಾಹಿದ್ ಮತ್ತು ಕರೀನಾ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗ್ಹೋಗಿದ್ದರು.

ಇದೇ ಸಿನೆಮಾವನ್ನ, ಈಗ ಮುಂಬೈನ ಚಿತ್ರ ಮಂದಿರವೊಂದರಲ್ಲಿ ಮತ್ತೊಮ್ಮೆ ಪ್ರದರ್ಶಿಸಲಾಗಿದೆ. ಈ ಸಿನೆಮಾ ಮತ್ತೆ ಹೌಸ್ ಫುಲ್ ಆಗಿ ಪ್ರದಶ೯ನ ಕಾಣಿಸಿಕೊಳ್ಳುತ್ತಿದ್ದು, ಈ ಖುಷಿಗೆ ನಟ ಶಾಹಿದ್ ಕಪೂರ್ ಚಲನಚಿತ್ರ ಮಂದಿರಕ್ಕೆ ಭೇಟಿ ಕೊಟ್ಟು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಥಿಯೇಟರ್‌ನಲ್ಲಿ ತಮ್ಮ ನೆಚ್ಚಿನ ನಟನನ್ನ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲ ಅಲ್ಲಿದ್ದ ಅಭಿಮಾನಿಗಳೆಲ್ಲ ಶಾಹಿದ್ ಸುತ್ತುವರೆದಿದ್ದಾರೆ. ಕೆಲ ಕಾಲ ಅಲ್ಲಿ ಕೊಂಚ ಆತಂಕದ ಆವರಣ ಆವರಿಸಿಕೊಂಡಿತ್ತು. ಆದರೂ ನಟ ಶಾಹಿದ್ ಅಭಿಮಾನಿಗಳನ್ನ ನಿರಾಸೆ ಮಾಡದೇ ಅವರ ಜೊತೆ ಸೆಲ್ಫಿ ತೆಗೆದುಕೊಂಡು, ಖುಷಿ-ಖುಷಿಯಾಗಿ ಕೆಲಕಾಲ ಅಲ್ಲೇ ಕಳೆದಿದ್ದಾರೆ. ಈ ಕ್ಷಣಗಳನ್ನ ನಟ ಶಾಹಿದ್, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ಸೇರಿದಂತೆ ಅನೇಕ ಭಾಷೆಯ ಸೂಪರ್ ಹಿಟ್ ಸಿನೆಮಾಗಳನ್ನ, ವಿಶೇಷ ಸಂದರ್ಭದಲ್ಲಿ ರಿ-ರಿಲೀಸ್‌(ಮರುಬಿಡುಗಡೆ) ಮಾಡುವ ಟ್ರೆಂಡ್ ಇದೆ. ಈಗ ‘ಜಬ್ ವೀ ಮೆಟ್’ ಸಿನೆಮಾ ಕೂಡ ವೆಲಂಟೈನ್ ದಿನದ ಪ್ರಯುಕ್ತ ಈಗ ಮರುಬಿಡುಗಡೆ ಮಾಡಲಾಗಿದೆ.

ಇಮ್ತಿಯಾಜ್ ಅಲಿ ಅಭಿನಯದ ‘ಜಬ್ ವಿ ಮೆಟ್’ ಚಿತ್ರ ಅಕ್ಟೋಬರ್ 26, 2007 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೇ ಸಿನೆಮಾ ಈಗ 16 ವರ್ಷ ಪೂರೈಸಿದೆ. ಬಾಲಿವುಡ್‌ನ ಎವರ್‌ಗ್ರಿನ್ ಸಿನೆಮಾಗಳಲ್ಲಿ ಒಂದಾಗಿರೋ ಈ ಸಿನೆಮಾದಿಂದಾಗಿ ಶಾಹಿದ್ ಮತ್ತು ಕರೀನಾ ಬಾಲಿವುಡ್‌ನಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಿದ್ದರು. ಇವರಿಬ್ಬರ ಪರಿಪಕ್ವ ಅಭಿನಯ, ಇಂದಿಗೂ ಅಭಿಮಾನಿಗಳಿಗೆ ಇಷ್ಟ ಅನ್ನೋದಕ್ಕೆ ಈಗ ಮತ್ತೆ ಬಿಡುಗಡೆಯಾದರೂ, ಚಲನಚಿತ್ರ ಹೌಸ್‌ಫುಲ್ ಆಗಿರುವುದಕ್ಕೆ ಸಾಕ್ಷಿಯಾಗಿದೆ.

https://youtu.be/NYXcPaSZT5o

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read