ಹಳೆಯ ಪ್ರೇಮಿಗಳ ಮಿಲನ: ವೇದಿಕೆಯಲ್ಲಿ ಅಚ್ಚರಿಯ ಆಲಿಂಗನ…..!

ಜೈಪುರದಲ್ಲಿ ನಡೆದ ಐಐಎಫ್‌ಎ 2025 ಪ್ರಶಸ್ತಿ ಸಮಾರಂಭದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್‌ನ ಮಾಜಿ ಪ್ರೇಮಿಗಳಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಖಾನ್ ಭೇಟಿಯಾಗಿದ್ದಾರೆ. ಈ ಅಪರೂಪದ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ರಿಕಾಗೋಷ್ಠಿಯಲ್ಲಿ ಕರೀನಾ ಕಪೂರ್ ಖಾನ್ ಮತ್ತು ಶಾಹಿದ್ ಕಪೂರ್ ಆತ್ಮೀಯವಾಗಿ ಆಲಿಂಗಿಸಿಕೊಂಡಿದ್ದಾರೆ. ನಂತರ ಕರೀನಾ ಕಪೂರ್ ಖಾನ್ ವೇದಿಕೆಯಲ್ಲಿದ್ದ ಕರಣ್ ಜೋಹರ್ ಅವರನ್ನು ಆಲಿಂಗಿಸಿಕೊಂಡಿದ್ದಾರೆ. ಈ ಕ್ಷಣದಲ್ಲಿ ಕಾರ್ತಿಕ್ ಆರ್ಯನ್, ಕೃತಿ ಸನೋನ್ ಸೇರಿದಂತೆ ಹಲವು ತಾರೆಯರು ಉಪಸ್ಥಿತರಿದ್ದರು.

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವರ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು “ಶಾಹಿದ್ ಮುಖದಲ್ಲಿ ಮುಜುಗರ ಎದ್ದು ಕಾಣುತ್ತಿತ್ತು” ಎಂದು ಹೇಳಿದರೆ, ಇನ್ನು ಕೆಲವರು “ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಜಬ್ ವಿ ಮೆಟ್ ಅಗೇನ್” ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ, ಕರೀನಾ ಕಪೂರ್ ಖಾನ್ “ಜಬ್ ವಿ ಮೆಟ್” ಚಿತ್ರದ ಕಥೆಯನ್ನು ಶಾಹಿದ್ ಕಪೂರ್ ಅವರೇ ತನಗೆ ಹೇಳಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದರು.

ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ 2006 ರಲ್ಲಿ ಬೇರ್ಪಟ್ಟರು. ನಂತರ, ಶಾಹಿದ್ ಕಪೂರ್ ಮೀರಾ ರಜಪೂತ್ ಅವರನ್ನು ವಿವಾಹವಾದರು ಮತ್ತು ಕರೀನಾ ಕಪೂರ್ ಖಾನ್ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಈ ಜೋಡಿ ಬಹಳ ವರ್ಷಗಳ ನಂತರ ಭೇಟಿಯಾಗಿರುವುದರಿಂದ ಅಭಿಮಾನಿಗಳು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

View this post on Instagram

 

A post shared by Manav Manglani (@manav.manglani)

 

View this post on Instagram

 

A post shared by IIFA Awards (@iifa)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read