ಶಾರುಖ್ ಖಾನ್ ಅವರ ಮುಂಬರುವ ʼಕಿಂಗ್ʼ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಪ್ರಸ್ತುತ ಹೊಸ ಜಾಹೀರಾತಿನಲ್ಲಿ ತನ್ನ ‘ಸ್ಕ್ರೀನ್ ಪ್ರೆಸೆನ್ಸ್’ಗಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿದ್ದಾರೆ.
ಚಿತ್ರರಂಗದ ಖ್ಯಾತನಾಮರ ಮಕ್ಕಳು ತೆರೆ ಮೇಲೆ ಕಾಣಿಸಿಕೊಂಡ ವೇಳೆ ಪ್ರೇಕ್ಷಕರು ಅವರ ಪೋಷಕರಿಗೆ ಹೋಲಿಸುತ್ತಾರೆ. ಅಲ್ಲದೇ ಸ್ವಜನ ಪಕ್ಷಪಾತದ ಆರೋಪವನ್ನೂ ತಾರೆಯರ ಮಕ್ಕಳು ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ.
ಜೋಯಾ ಅಖ್ತರ್ ಅವರ ದಿ ಆರ್ಚೀಸ್ (2023) ನ್ನು ಮೂವರು ಸ್ಟಾರ್ ಮಕ್ಕಳ ಜೊತೆ ಪ್ರಾರಂಭಿಸಿದಾಗ, ನೆಟಿಜನ್‌ಗಳು ಟ್ರೋಲ್ ಮಾಡಿದ್ದರು. ವೆರೋನಿಕಾ ಪಾತ್ರದಲ್ಲಿ ನಟಿಸಿದ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ವಿಶೇಷವಾಗಿ ಟ್ರೋಲ್ ಗೆ ಒಳಗಾಗಿದ್ದರು. ಇದೀಗ ಆಕೆ ಚಿತ್ರರಂಗ ಪ್ರವೇಶಿಸಿ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಸುಹಾನಾ ಮತ್ತೆ ಸುದ್ದಿಯಲ್ಲಿದ್ದು, ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ಕಳೆದ ಒಂದು ವರ್ಷದಲ್ಲಿ, ಸುಹಾನಾ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಫೋನ್‌ನ ಜಾಹೀರಾತು. ಕ್ಲಿಪ್‌ನಲ್ಲಿ, ಸುಹಾನಾ ಒಂದು ಸಂಭಾಷಣೆಯನ್ನು ಹೊಂದಿದ್ದಾರೆ. ಸುಹಾನಾ ತನ್ನ ನೃತ್ಯದ ಚಲನೆಯನ್ನು ಪ್ರದರ್ಶಿಸಿದ್ದು, ಆದರೆ ಈ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಅನೇಕರು ಸುಹಾನಾರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
Suhana in the new Vivo Ad is absolutely horrible!!
byu/measkuanswer inBollyBlindsNGossip