Video | ತಮ್ಮನ್ನು ಭೇಟಿಯಾಗಲು 95 ದಿನಗಳ ಕಾಲ ಮನೆ ಮುಂದೆ ನಿಂತಿದ್ದ ಅಭಿಮಾನಿಗೆ ಶಾರೂಖ್ ಕೊಟ್ಟ ಹಣವೆಷ್ಟು ಗೊತ್ತಾ ?

ಬಾಲಿವುಡ್‌ ಚಿತ್ರರಂಗದ ಖ್ಯಾತ ನಟ ಶಾರೂಖ್ ಖಾನ್‌ ಅವರನ್ನು ಭೇಟಿಯಾಗುವ ಸಲುವಾಗಿಯೇ ತಿಂಗಳುಗಟ್ಟಲೇ ಅಂಗಡಿ ಬಂದ್‌ ಮಾಡಿ ಜಾರ್ಖಂಡ್‌ ನಿಂದ ಆಗಮಿಸಿದ್ದ ಅವರ ಅಭಿಮಾನಿ‌ಯೊಬ್ಬ ಬರೋಬ್ಬರಿ 95 ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿದ್ದರು.

ನವೆಂಬರ್ 2 ರಂದು , ಶಾರುಖ್ ಖಾನ್ ಜಾರ್ಖಂಡ್‌ನಿಂದ ಪ್ರಯಾಣಿಸಿ ತಮ್ಮ ನಿವಾಸ ʼಮನ್ನತ್‌ʼ ಹೊರಗೆ ಮೊಕ್ಕಾಂ ಹೂಡಿದ್ದ ಅಭಿಮಾನಿಯನ್ನು ಭೇಟಿಯಾದಾಗ ಅವರು ಭಾವುಕರಾಗಿದ್ದಾರೆ.

ಅಭಿಮಾನಿಯನ್ನು ಭೇಟಿಯಾಗಿದ್ದಷ್ಟೇ ಅಲ್ಲ ಅವರಿಗೆ ಆಹಾರ ಮತ್ತು ನೀರಿನೊಂದಿಗೆ 14,700 ರೂ. ನೀಡಿದ್ದು, ಇದನ್ನು ಅವರ ಅಭಿಮಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇನ್‌ಸ್ಟಂಟ್ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ, ಜಾರ್ಖಂಡ್‌ನವರಾದ ಶೇರ್ ಮೊಹಮ್ಮದ್ ಅವರು, ಶಾರುಖ್ ಖಾನ್ ಅವರನ್ನು ಭೇಟಿಯಾಗಲು ತಮ್ಮ ದೃಢಸಂಕಲ್ಪದಿಂದ ಒಂದು ತಿಂಗಳ ಕಾಲ ತನ್ನ ವ್ಯಾಪಾರವನ್ನು ಬಂದ್‌ ಮಾಡಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ʼಪಠಾಣ್ʼ ನಟ ತಮ್ಮ ಅಭಿಮಾನಿಯನ್ನು ಭೇಟಿಯಾಗಿ ಫೋಟೋಗೆ ಪೋಸ್‌ ನೀಡಿದರಲ್ಲದೇ, ಏನಾದರೂ ಸಹಾಯದ ಅಗತ್ಯವಿದೆಯೇ ಎಂದು ಪ್ರಶ್ನಿಸಿದರಲ್ಲದೇ, 10,000 ರೂ. ನಗದು ನೀಡಿ ಜೊತೆಗೆ ಪೆಟ್ರೋಲ್ ವೆಚ್ಚಕ್ಕಾಗಿ ಹೆಚ್ಚುವರಿ 4,700 ರೂ. ನೀಡಿ ಗೌರವಯುತವಾಗಿ ನಡೆಸಿಕೊಂಡಿದ್ದನ್ನು ಅಭಿಮಾನಿ ಹಂಚಿಕೊಂಡಿದ್ದಾರೆ.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read