‘ಡಂಕಿ’ ಬಿಡುಗಡೆಗೂ ಮುನ್ನ ಶಾರುಖ್ ಖಾನ್ ಟೆಂಪಲ್ ರನ್; ಮಗಳೊಂದಿಗೆ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಬಹುನಿರೀಕ್ಷಿತ ಚಿತ್ರ ಡಂಕಿ ಬಿಡುಗಡೆಗೆ ಮುನ್ನ ಡಿಸೆಂಬರ್ 14 ರ ಗುರುವಾರ ಶಿರಡಿ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದರು. ತಮ್ಮ ಮಗಳು ಸುಹಾನಾ ಖಾನ್ ಅವರೊಂದಿಗೆ ಸಾಯಿಬಾಬಾನ ಆಶೀರ್ವಾದ ಪಡೆದರು. ಶಾರುಖ್ ಖಾನ್ ದೇಗುಲಕ್ಕೆ ಭೇಟಿ ನೀಡಿದ ಹಲವು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಸುಹಾನಾ ನೀಲಿಬಣ್ಣದ ಸಲ್ವಾರ್ ಧರಿಸಿದ್ದರೆ, ಶಾರುಖ್ ಖಾನ್ ವೈಟ್ ಟೀ ಶರ್ಟ್ ಮೇಲೆ ಕಪ್ಪು ಜಾಕೆಟ್ ಧರಿಸಿದ್ದರು. ಈ ಸಂದರ್ಭದಲ್ಲಿ ಶಾರುಖ್ ಖಾನ್, ದೇವಾಲಯದ ಅಧಿಕಾರಿಗಳೊಂದಿಗೆ ಕೈಕುಲುಕುತ್ತಾ ಮಾತನಾಡಿದರು. ಅಲ್ಲದೆ ಶಾರುಖ್ ಖಾನ್ ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

ಈ ವರ್ಷ ಶಾರುಖ್ ಅಭಿನಯದ ಪಠಾಣ್ ಮತ್ತು ಜವಾನ್ ಚಿತ್ರಗಳು ಬ್ಲಾಕ್ ಬಸ್ಟರ್ ಆಗಿದ್ದು, ಉತ್ತಮ ಯಶಸ್ಸು ಸಾಧಿಸಿವೆ. ಡಿಸೆಂಬರ್ 21 ರಂದು ಬಿಡುಗಡೆಯಾಗಲಿರುವ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರ ಕೂಡ ಯಶಸ್ಸು ಗಳಿಸಿ ಶಾರುಖ್ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಕಳೆದ ಕೆಲ ದಿನಗಳಿಂದ ಚಿತ್ರದ ಸಕ್ಸಸ್ ಗಾಗಿ ಟೆಂಪಲ್ ರನ್ ಮಾಡ್ತಿದ್ದಾರೆ.

ಡಿಸೆಂಬರ್ 12 ರಂದು ಶಾರುಖ್ ಖಾನ್ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜಾ ಪೆಂಡಾಲ್‌ಗೆ ಅವರ ಕಿರಿಯ ಮಗ ಅಬ್ರಾಮ್ ನೊಂದಿಗೆ ಭೇಟಿ ನೀಡಿದ್ದರು. ಜವಾನ್ ಬಿಡುಗಡೆಗೂ ಮುನ್ನ ಶಾರುಖ್ ತಿರುಮಲದಲ್ಲಿರುವ ಪವಿತ್ರ ತಿರುಪತಿ ಬಾಲಾಜಿ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.

ಶಾರುಖ್ ಪುತ್ರಿ ಸುಹಾನಾ ಈ ವರ್ಷ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಜೋಯಾ ಅಖ್ತರ್ ಅವರ ‘ದಿ ಆರ್ಚೀಸ್” ನಲ್ಲಿ ಕಾಣಿಸಿಕೊಂಡಿದ್ದಾರೆ.

https://twitter.com/fpjindia/status/1735257893333799261?ref_src=twsrc%5Etfw%7Ctwcamp%5Etweetembed%7Ctwterm%5E1735257893333799261%7Ctwgr%5E5b605c122d32c053daa7aca187a3cb7060986b54%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fshahrukhkhanvisitsshirdisaibabatemplewithdaughtersuhanakhanaheadofdunkireleasevideogoesviral-newsid-n565294120

https://twitter.com/PTI_News/status/1734418599819850117?ref_src=twsrc%5Etfw%7Ctwcamp%5Etweetembed%7Ctwterm%5E1734418599819850117%7Ctwgr%5E5b605c122d32c053daa7aca187a3cb7060986b54%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fshahrukhkhanvisitsshirdisaibabatemplewithdaughtersuhanakhanaheadofdunkireleasevideogoesviral-newsid-n565294120

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read