ಚೆನ್ನೈನಲ್ಲಿ ಭಾನುವಾರ ಕೊಲ್ಕತ್ತ ನೈಟ್ ರೈಡರ್ಸ್ ತಮ್ಮ ಮೂರನೇ ಇಂಡಿಯನ್ ಪ್ರೀಮಿಯರ್ ಲೀಗ್ ಕಿರೀಟವನ್ನು ಗೆದ್ದ ನಂತರ KKR ಮಾಲೀಕ ಶಾರುಖ್ ಖಾನ್ ಭಾವಪರವಶರಾಗಿದ್ದಾರೆ.
MA ಚಿದಂಬರಂ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ತನ್ನ ಪುತ್ರಿ ಸುಹಾನಾ ಮತ್ತು ಪುತ್ರರಾದ ಅಬ್‌ರಾಮ್ ಮತ್ತು ಆರ್ಯನ್ ಅವರೊಂದಿಗೆ ಗೆಲುವಿನ ರನ್‌ಗಳನ್ನು ಹೊಡೆದ ಕೂಡಲೇ ಬಾಲಿವುಡ್ ಸೂಪರ್‌ಸ್ಟಾರ್ ವಿಜಯೋತ್ಸವವನ್ನು ಆಚರಿಸಿದರು.
ನೈಟ್ ರೈಡರ್ಸ್‌ನ ಮೆಂಟರ್ ಆಗಿ ತನ್ನ ಮೊದಲ ಸೀಸನ್ ನಲ್ಲಿ ಕಪ್ ತಂದು ಕೊಟ್ಟ ಗೌತಮ್ ಗಂಭೀರ್ ಅವರ ಹಣೆಗೆ ಶಾರುಖ್ ಖಾನ್ ಮುತ್ತಿಟ್ಟಿದ್ದಾರೆ. 2012 ಮತ್ತು 2014 ರಲ್ಲಿ ನಾಯಕನಾಗಿ ಕೆಕೆಆರ್ ತಂಡವನ್ನು ಗಂಭೀರ್ ಮುನ್ನಡೆಸಿದ್ದರು.
https://twitter.com/Azad_jawan/status/1794784866569199931
https://twitter.com/SRKajolBrasil/status/1794788264404263414