ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಸೋತಿದ್ದು ಪಂದ್ಯದ ಬಳಿಕ ನಡೆದ ಅಪೂರ್ವ ಕ್ಷಣ ಹಲವರ ಮನಗೆದ್ದಿದೆ.
ರಾಯಲ್ ಚಾಲೆಂಜರ್ಸ್ ವಿರುದ್ಧ ನಟ ಶಾರುಖ್ ಖಾನ್ ಒಡೆತನದ ಫ್ರಾಂಚೈಸಿ ಗಮನಾರ್ಹ ಪ್ರದರ್ಶನ ನೀಡಿ 81 ರನ್ ಗಳಿಂದ ಜಯಗಳಿಸಿತು.
ಈ ಪಂದ್ಯದ ಬಳಿಕ ನಡೆದ ವಿರಾಟ್ ಕೊಹ್ಲಿ ಮತ್ತು ಶಾರುಖ್ ಖಾನ್ ನಡುವಿನ ಆರೋಗ್ಯಕರ ಕ್ಷಣ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ ಬಾಲಿವುಡ್ ಬಾದ್ ಶಾ ಅಭಿಮಾನಿಗಳ ಹೃದಯ ಗೆದ್ದಿದೆ. ಆ ಅಪೂರ್ವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿ ಪರಸ್ಪರ ನಗು ಬೀರುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದಾರೆ.
ಕೊಹ್ಲಿಯ ಕೆನ್ನೆ ಸವರುವ ಶಾರುಖ್ ʼಪಠಾಣ್ʼ ಚಿತ್ರದ ಬ್ಲಾಕ್ ಬಸ್ಟರ್ ಹಾಡು “ಜೂಮೇ ಜೋ ಪಥಾನ್” ನ ಹುಕ್-ಸ್ಟೆಪ್ ಅನ್ನು ಕಲಿಸಿಕೊಡಲು ಮುಂದಾಗುತ್ತಾರೆ. ಶಾರುಖ್ ಖಾನ್ ಹೆಜ್ಜೆ ಹಾಕ್ತಿದ್ದಂತೆ ವಿರಾಟ್ ಅದನ್ನು ಅನುಸರಿಸುತ್ತಾರೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಹೈ ವೋಲ್ಟೇಜ್ ಪಂದ್ಯದ ಬಳಿಕ ಶಾರುಖ್ ನಡೆಯನ್ನ ಪ್ರಶಂಸಿಸಿದ್ದಾರೆ.
https://twitter.com/SRKUniverse/status/1644041530938920961?ref_src=twsrc%5Etfw%7Ctwcamp%5Etweetembed%7Ctwterm%5E1644041530938920961%7Ctwgr%5Ea9b4f25787e01c0085e89b66bdb44915282042a3%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fshah-rukh-khan-and-virat-kohli-hug-each-other-groove-to-jhoome-jo-pathaan-3928006