ರುದ್ರ ಶಿವ ನಿರ್ದೇಶನದ ಶರತ್ ಅಭಿನಯದ ‘ಶಬ್ಬಾಷ್’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ‘ಶಬ್ಬಾಷ್’ ಚಿತ್ರತಂಡ ಇಂದು ಸಂಕ್ರಾಂತಿ ಹಬ್ಬಕ್ಕೆ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಸ್ತ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದೆ.
ಈ ಚಿತ್ರದಲ್ಲಿ ಶರತ್ ಅವರಿಗೆ ಜೋಡಿಯಾಗಿ ನಿಸರ್ಗ ಅಭಿನಯಿಸಿದ್ದು, ಸುಶ್ಮಿತಾ, ರಘುರಾಜ್ ಮಲ್ನಾಡ್, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್, ಪದ್ಮಾ ಜಗ್ದಪ್ಪ, ನಾಗಾಭರಣ, ಉಳಿದ ಪಾತ್ರ ಪಾತ್ರ ವರ್ಗದಲ್ಲಿದ್ದಾರೆ. Ace22 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ನರಸಿಂಹ ಹಾಗೂ ಚಂದ್ರ ಬಂಡೆ ಅವರ ಸಾಹಸ ನಿರ್ದೇಶನ, ರುದ್ರಶಿವ ಸಂಭಾಷಣೆ, ಹಾಗೂ ಶ್ಯಾಮ್ ರಾವ್ ಛಾಯಾಗ್ರಹಣವಿದೆ.