BIG NEWS: ಇಂದಿನಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಆರಂಭ

ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಇಂದಿನಿಂದ ಆರಂಭವಾಗಲಿದೆ. ಇಂದು ಶಬರಿಮಲೆಯಲ್ಲಿ ಮಂಡಲ ಪೂಜೆ ಆರಂಭವಾಗಲಿದೆ. ಈ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನ ಪ್ರಾರಂಭವಾಗಲಿದೆ.

ಇಂದು ಮಂಡಲ ಪೂಜೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಭಕ್ತರು ಪಂಪಾ ನದಿ ಬಳಿಯಿಂದ ಶಬರಿಮಲೆಗೆ ಯಾತ್ರೆ ಆರಂಭಿಸಲಿದ್ದಾರೆ. ಇಂದಿನಿಂದ ಡಿಸೆಂಬರ್ 25ರವರೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ 18 ಗಂಟೆಗಳ ಕಾಲ ದರ್ಶನಕ್ಕೆ ಅವಕಶವಿದ್ದು, ನಿತ್ಯವೂ 70,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಸ್ಥಳದಲ್ಲಿಯೇ ಬುಕಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು. ಪಂಪಾ, ಎರುಮೇಲಿ, ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್ ತೆರೆಯಲಾಗಿದೆ. ಸ್ಪಾಟ್ ಬುಕಿಂಗ್ ಮಾಡುವ ಭಕ್ತರು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ.

ಇನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಬರಿಮಲೆಗೆ ಪ್ರಯಾಣಿಕರಿಗೆ ಆನ್ ಲೈನ್ ಟಿಇಕೆಟ್ ಬುಕಿಂಗ್ ಕಲ್ಪಿಸಿದೆ. ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನ ಬುಕ್ ಮಾಡುವಾಗ ಭಕ್ತರು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಗಳನ್ನು ಖರೀದಿಸಲು ವಿಶೇಷ ಅವಕಾಶವಿದೆ. 40 ಜನರ ಗುಂಪು ಹೊಂದಿರುವವರು 10 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read