ಬೆಂಗಳೂರು : ಸಿನಿಮಾ ಮಾಡುವುದಾಗಿ ಹೇಳಿ ಕರೆಸಿಕೊಂಡು ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್ ಅವರನ್ನು ಬಂಧಿಸಲಾಗಿದೆ.
ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಹೇಮಂತ್ ಅವರನ್ನು ಬಂಧಿಸಿದ್ದು, ನಟಿಗೆ ಮಾಕ್ ಟೇಲ್ ನಲ್ಲಿ ಮದ್ಯ ಬೆರೆಸಿ ಕುಡಿದು ಮತ್ತು ಬರುವಂತೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ರಿಚ್ಚಿ ಸಿನಿಮಾದಲ್ಲಿ ನಟಿಗೆ ಅವಕಾಶ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೇ ನಟಿಯ ಖಾಸಗಿ ಫೋಟೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಮುಂಬೈಗೆ ಶೂಟಿಂಗ್ ಹೋಗಿದ್ದಾಗ ಈತ ಅಸಭ್ಯ ವರ್ತನೆ ತೋರಿದ್ದಾನೆ. ಅಲ್ಲದೇ ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕೆಂದು ಕಿರುಕುಳ ನೀಡಿದ್ದಾನೆ.ಲೈಂಗಿಕ ಕಿರುಕುಳ ನೀಡಿ ಸಂಭಾವನೆ ನೀಡದೇ ವಂಚಿಸಿರುವುದಾಗಿ ನಟಿ ದೂರು ನೀಡಿದ್ದು, ಪೊಲೀಸರು ಹೇಮಂತ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.