ಮೃತರ ಮೇಲಿನ ಅತ್ಯಾಚಾರ ತಡೆಗೆ ಕಠಿಣ ಶಿಕ್ಷೆ: ಕಾನೂನು ತಿದ್ದುಪಡಿಗೆ ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

ಬೆಂಗಳೂರು: ಮೃತರ ಮೇಲಿನ ಅತ್ಯಾಚಾರ ತಡೆಗೆ ಕಠಿಣ ಶಿಕ್ಷೆ ಜಾರಿ ಮಾಡಲು ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.

ಈ ಪ್ರಕರಣದಲ್ಲಿ ಅತ್ಯಾಚಾರ ಕೇಸ್ ನಡಿ ಶಿಕ್ಷೆಗೆ ಅವಕಾಶವಿಲ್ಲ ಎಂದು ಹೇಳಿದ ಹೈಕೋರ್ಟ್ ಐಪಿಸಿ ಸೆಕ್ಷನ್ 377 ತಿದ್ದುಪಡಿಗೆ ಶಿಫಾರಸು ಮಾಡಿದೆ. ಮೃತ ದೇಹಗಳ ಮೇಲೆ ಸಂಭೋಗ ನಡೆಸುವವರಿಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಅವಕಾಶವಿಲ್ಲದ ಕಾರಣ ಇಂತಹ ಅಪರಾಧ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸಲು ಅವಕಾಶವಾಗುವ ರೀತಿಯಲ್ಲಿ ಐಪಿಸಿ ಸೆಕ್ಷನ್ 377 ಕ್ಕೆ ತಿದ್ದುಪಡಿ ಮಾಡಬೇಕು ಅಥವಾ ಹೊಸ ನಿಬಂಧನೆ ರೂಪಿಸಬೇಕು ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜೀವನದ ಹಕ್ಕಿನಲ್ಲಿ ಮೃತ ದೇಹದ ಘನತೆಯ ಹಕ್ಕು ಸೇರಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮೃತರ ಮೇಲೆ ಲೈಂಗಿಕ ಕ್ರಿಯೆ ನಡೆಸುವ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ಮಾಡುವಂತೆ ಹೇಳಿದೆ. ಮೃತರ ಮೇಲಿನ ಅತ್ಯಾಚಾರ ಕಡೆಗೆ ಎಲ್ಲಾ ಶವಾಗಾರಗಳಲ್ಲಿ ಆರು ತಿಂಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.

ಕೊಲೆ ಮತ್ತು ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಶಿರಾ ತಾಲೂಕಿನ ಗುಳಿಗೇನಹಳ್ಳಿಯ ರಂಗರಾಜು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ ಮನವಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ವೆಂಕಟೇಶ ನಾಯ್ಕ್ ಅವರಿದ್ದ ವಿಭಾಗಿಯ ಪೀಠದಿಂದ ಮಹತ್ವದ ತೀರ್ಪು ನೀಡಲಾಗಿದೆ.

ಮೃತ ಮಹಿಳೆಯ ಮೇಲಿನ ಅತ್ಯಾಚಾರವು ಐಪಿಸಿಯ ಸೆಕ್ಷನ್ 376 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಈ ಸೆಕ್ಷನ್ ಅನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ(ಪುರುಷರು, ಮಹಿಳೆಯರು ಅಥವಾ ಪ್ರಾಣಿಗಳ ಮೃತ ದೇಹಗಳನ್ನು ಅತ್ಯಾಚಾರ) ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಕೇಂದ್ರ ಸರ್ಕಾರವು ಸೆಕ್ಷನ್ 377 ರ ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕು ಅಥವಾ ಯುಕೆ, ಕೆನಡಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮಾಡಲಾಗಿರುವಂತೆ ಸತ್ತ ಮಹಿಳೆಯರ ವಿರುದ್ಧ ನೆಕ್ರೋಫಿಲಿಯಾ (ಮೃತದೇಹದ ಮೇಲಿನ ಲೈಂಗಿಕ ದೌರ್ಜನ್ಯ) ಅಥವಾ ಸ್ಯಾಡಿಸಂ ಅಪರಾಧ ಎಂದು ಪ್ರತ್ಯೇಕ ನಿಬಂಧನೆಯನ್ನು ಪರಿಚಯಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ವೆಂಕಟೇಶ್ ನಾಯ್ಕ್ ಟಿ ಅವರ ವಿಭಾಗೀಯ ಪೀಠವು ಮೇ 30 ರಂದು ಆದೇಶ ನೀಡಿದೆ.

ತುಮಕೂರು ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಂಗರಾಜುಗೆ ವಿಧಿಸಲಾಗಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ನ್ಯಾಯಾಲಯ ಈ ಆದೇಶ ನೀಡಿದ್ದು, 2017ರ ಆಗಸ್ಟ್‌ನಲ್ಲಿ ಸೆಷನ್ಸ್ ನ್ಯಾಯಾಲಯವು ವಿಧಿಸಿದ್ದ ದಂಡದೊಂದಿಗೆ ಜೀವಾವಧಿ ಶಿಕ್ಷೆಯನ್ನು ದೃಢಪಡಿಸಿದೆ. 2015ರ ಜೂನ್‌ನಲ್ಲಿ ಕಂಪ್ಯೂಟರ್ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 21 ವರ್ಷದ ಯುವತಿಯೊಬ್ಬಳು ಕತ್ತು ಸೀಳಿ ಕೊಂದು ಶವದ ಮೇಲೆ ಅತ್ಯಾಚಾರ ಎಸಗಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read