ವಿಜಯಪುರ : ವಿಜಯಪುರದಲ್ಲಿ ಸರಣಿ ಭೂಕಂಪನ ಸಂಭವಿಸಿದ್ದು, 2 ತಿಂಗಳಲ್ಲಿ ಬರೋಬ್ಬರಿ 11 ಬಾರಿ ಭೂಮಿ ಕಂಪಿಸಿದೆ.
ಮಂಗಳವಾರ ಅ.28 ರ ರಾತ್ರಿ 11:42 ಸುಮಾರಿಗೆ ಹಾಗೂ ಅ.29 ರ ಬುಧವಾರ ಬೆಳಗ್ಗೆ 5:30 ಕ್ಕೆ ಮತ್ತೆ ಭೂಮಿ ಕಂಪಿಸಿದೆ. ಭೂ ಕಂಪನದಿಂದ ಜನರು ಬೆಚ್ಚಿ ಬಿದ್ದಿದ್ದು, ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜಿಲ್ಲೆಯಲ್ಲಿ 3.3 ತೀವ್ರತೆಯ ಸರಣಿ ಭೂಕಂಪ ಸಂಭವಿಸಿದ್ದು, ಪದೇ ಪದೇ ಸಂಭವಿಸುತ್ತಿರುವ ಭೂಕಂಪದಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
