ಮಾಸ್ಕೋದಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ ರಷ್ಯಾದ ಹಿರಿಯ ಜನರಲ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ದೇಶದ ಪ್ರಮುಖ ಫೆಡರಲ್ ತನಿಖಾ ಪ್ರಾಧಿಕಾರವಾದ ರಷ್ಯಾದ ತನಿಖಾ ಸಮಿತಿ(SK) ವೋಕ್ಸ್‌ವ್ಯಾಗನ್ ಗಾಲ್ಫ್ ಕಾರ್ ಸ್ಫೋಟಗೊಂಡು ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ಬಾಲಶಿಖಾದ ಪೂರ್ವ ಉಪನಗರದಲ್ಲಿರುವ ಜನರಲ್ ಅವರ ಮನೆಯ ಪಕ್ಕದಲ್ಲಿ ಕಾರು ನಿಲ್ಲಿಸಲಾಗಿತ್ತು ಮತ್ತು ಅವರು ಅದರ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಫೋಟಗೊಂಡಿದೆ.
ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ದಾಳಿಗೆ ಉಕ್ರೇನ್ ಅನ್ನು ದೂಷಿಸಿದ್ದಾರೆ. ಕೈವ್ ನಮ್ಮ ದೇಶದೊಳಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ. ಇದಕ್ಕೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Senior Russian General killed in car explosion near Moscow
— ANI Digital (@ani_digital) April 25, 2025
Read @ANI Story | https://t.co/LX9o0e9jbl#Russia #YaroslavMoskalik #Balashikha #Moscow pic.twitter.com/elf9MJqwK1