ನವದೆಹಲಿ: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯ ನಡುವೆ ವಿವಿಧ ಸ್ಥಳಗಳಲ್ಲಿ ಹಳಿಗಳ ಮೇಲೆ ನೀರು ನಿಂತಿದ್ದರಿಂದ ದಕ್ಷಿಣ ಮಧ್ಯ ರೈಲ್ವೆ(ಎಸ್‌ಸಿಆರ್) 21 ರೈಲುಗಳನ್ನು ರದ್ದುಗೊಳಿಸಿದೆ. ಸುಮಾರು 13 ರೈಲುಗಳನ್ನು ಬೇರೆಡೆಗೆ ತಿರುಗಿಸಿದೆ. ಭಾರೀ ಮಳೆಯಿಂದಾಗಿ ತೆಲಂಗಾಣದ ಕೇಸಮುದ್ರಂ ಮತ್ತು ಮಹಬೂಬಾಬಾದ್ ನಡುವಿನ ರೈಲ್ವೆ ಹಳಿಗೂ ಹಾನಿಯಾಗಿದೆ.
21 ರೈಲುಗಳು ರದ್ದು
SCR ಪ್ರಕಾರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ ರದ್ದಾದ 21 ರೈಲುಗಳಲ್ಲಿ MGR ಚೆನ್ನೈ ಸೆಂಟ್ರಲ್ ನಿಂದ ಛಾಪ್ರಾ, ಛಾಪ್ರಾದಿಂದ MGR ಚೆನ್ನೈ ಸೆಂಟ್ರಲ್, MGR ಚೆನ್ನೈ ಸೆಂಟ್ರಲ್ ನಿಂದ ನವದೆಹಲಿ ಮತ್ತು ನವದೆಹಲಿಯಿಂದ MGR ಚೆನ್ನೈ ಸೆಂಟ್ರಲ್ ಸೇರಿದಂತೆ ಇತರ ರೈಲು ಸಂಚಾರ ರದ್ದು ಮಾಡಲಾಗಿದೆ.
12 ರೈಲುಗಳ ಮಾರ್ಗ ಬದಲಾವಣೆ
ಹೆಚ್ಚುವರಿಯಾಗಿ, ಭಾರೀ ಮಳೆಯಿಂದಾಗಿ 12763 ತಿರುಪತಿ-ಸಿಕಂದರಾಬಾದ್, 22352 SMVT ಬೆಂಗಳೂರು-ಪಾಟ್ಲಿಪುತ್ರ, 22674 ಮನ್ನಾರ್ಗುಡಿ-ಭಗತ್ ಕಿ ಕೋಠಿ, ಮತ್ತು 20805 ವಿಶಾಖಪಟ್ಟಣಂ-ನವದೆಹಲಿ ಸೇರಿದಂತೆ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಜನರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿದೆ. ಸಹಾಯವಾಣಿ ಸಂಖ್ಯೆಗಳು; ಹೈದರಾಬಾದ್-27781500, ವಾರಂಗಲ್-2782751, ಕಾಜಿಪೇಟ್-27782660 ಮತ್ತು ಖಮ್ಮನ್-2782885.
ಪ್ರಧಾನಿ ಮೋದಿ ಭರವಸೆ
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆಯಿಂದ ಎದುರಾಗಿರುವ ಸವಾಲುಗಳನ್ನು ನಿವಾರಿಸಲು ಕೇಂದ್ರವು ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ತೆಲಂಗಾಣದಲ್ಲಿ ಪ್ರತ್ಯೇಕ ಮಳೆ-ಸಂಬಂಧಿತ ಘಟನೆಗಳಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ, ವಿಶೇಷವಾಗಿ ಹೈದರಾಬಾದ್‌ನಲ್ಲಿ ಭಾರೀ ಮಳೆ ಮುಂದುವರಿದಿದೆ. ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ತೆಲಂಗಾಣ ಮುಖ್ಯಮಂತ್ರಿ ತುರ್ತು ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯು ಜನಜೀವನವನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ, ವಿಶೇಷವಾಗಿ ವಿಜಯವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ರಾಜ್ಯಾದ್ಯಂತ 17,000 ಜನರನ್ನು ಸ್ಥಳಾಂತರಿಸಲಾಗಿದೆ.
Bulletin No. 21 SCR PR No. 346 Dt. 01.09.2024 on "Cancellation/Diversion of Trains due to Heavy Rains" pic.twitter.com/pf5brQyOUG
— South Central Railway (@SCRailwayIndia) September 1, 2024