ಭಾರತೀಯ ಹತ್ತಿ ನಿಗಮ (ಸಿಸಿಐ)ವು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿಯಲ್ಲಿ ಹತ್ತಿ ಖರೀದಿ ಕೈಗೊಳ್ಳಲಿದೆ. 2025-26 ನೇ ಸಾಲಿನ ಬೆಳೆ ವರ್ಷಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಹತ್ತಿ ಮಾರಾಟ ಮಾಡಲು ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ದಲ್ಲಿ ಸ್ವಯಂ ನೋಂದಣಿ ಪ್ರಾರಂಭಿಸಲಾಗಿದೆ.
ಆಸಕ್ತ ರೈತರು ಅಕ್ಟೋಬರ್ 31, 2025 ರೊಳಗಾಗಿ ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಅಕ್ಟೋಬರ್ 21 ರಿಂದ ಹತ್ತಿ ಖರೀದಿ ಪ್ರಾರಂಭಿಸಲಾಗುತ್ತಿದ್ದು, ಅಪ್ಲಿಕೇಶನ್ದಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಹತ್ತಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಭಾರತೀಯ ಹತ್ತಿ ನಿಗಮ (ಸಿಸಿಐ)ವು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದಿ ಕಾಟನ್ ಕಾರ್ಪೋರೆಷನ್ ಆಫ್ ಇಂಡಿಯಾ ಲೀ. ಬಿಓ ಹುಬ್ಬಳ್ಳಿ, 3 ನೇ ಮಹಡಿ, ಡಬ್ಲ್ಯೂ. ಬಿ. ಪ್ಲಾಜಾ, ನ್ಯೂ ಕಾಟನ್ ಮಾರ್ಕೆಟ, ಹುಬ್ಬಳ್ಳಿ, ದೂರವಾಣಿ ಸಂಖ್ಯೆ: 0836-2356353/354/355/357 ಗೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.