ಕನಸಿನಲ್ಲಿ ಇವು ಕಂಡ್ರೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದರ್ಥ

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ ನಮ್ಮ ಜೀವನದಲ್ಲಾಗುವ ಘಟನೆಗಳಿಗೂ ಸಂಬಂಧವಿರುತ್ತದೆ. ಶಾಸ್ತ್ರಗಳ ಪ್ರಕಾರ, ಮುಂದಾಗುವ ಘಟನೆಗಳ ಬಗ್ಗೆ ಕನಸು ನಮಗೆ ಸೂಚನೆ ನೀಡುತ್ತದೆ. ಕೆಲ ಕನಸುಗಳು ಕಂಕಣ ಕೂಡಿ ಬಂದಿದೆ. ಮದುವೆ ಶೀಘ್ರವೇ ಆಗಲಿದೆ ಎಂಬ ಸಂಕೇತವನ್ನು ನೀಡುತ್ತವೆ.

ಯುವತಿಯೊಬ್ಬಳಿಗೆ ಕನಸಿನಲ್ಲಿ ಪಕ್ಷಿ ಕಂಡ್ರೆ ಆಕೆ ಪ್ರೇಮ ಸಂಬಂಧ ವಿವಾಹವಾಗಿ ಪರಿವರ್ತನೆಯಾಗಲಿದೆ ಎಂದರ್ಥ. ಶೀಘ್ರವೇ ಆಕೆಗೆ ಮದುವೆ ಪ್ರಾಪ್ತಿಯಾಗಲಿದೆ.

ಸಂತೋಷವಾಗಿ ಯಾರಾದ್ರೂ ನೃತ್ಯ ಮಾಡಿದಂತೆ ಕಂಡರೆ ಶೀಘ್ರ ಮದುವೆಯಾಗಲಿದೆ ಎಂದುಕೊಳ್ಳಿ.

ಕನ್ಯೆಯೊಬ್ಬಳ ಕನಸಿನಲ್ಲಿ ಮೂರ್ತಿ ಮಾಡುವ ಶಿಲ್ಪಿ ಕಂಡ್ರೆ ಆಕೆ ಜೀವನದಲ್ಲಿ ಬೇಗ ಪತಿಯ ಆಗಮನವಾಗಲಿದೆ ಎಂದರ್ಥ.

ಯುವತಿಯೊಬ್ಬಳು ಕನಸಿನಲ್ಲಿ ಸ್ನೇಹಿತೆ ಬಳೆಗಳನ್ನು ಧರಿಸಿದ್ರೆ ಆಕೆಗೆ ಆದಷ್ಟು ಬೇಗ ಮದುವೆಯಾಗಲಿದೆ ಎಂಬ ಸಂಕೇತ.

ಯುವತಿಯೊಬ್ಬಳಿಗೆ ಜಾತ್ರೆಯಲ್ಲಿ ಸುತ್ತಾಡಿದಂತೆ ಕನಸು ಬಿದ್ರೆ ಅದು ಕೂಡ ಮದುವೆಯ ಸೂಚನೆ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read