ನವದೆಹಲಿ : ಲೋಕಸಭೆಗೆ ನುಗ್ಗಿ ರಂಪಾಟ ಮಾಡಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಎಂಜಿನಿಯರ್ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ದುಷ್ಕರ್ಮಿಗಳು ದಿಢೀರ್ ಕಲಾಪಕ್ಕೆ ಜಿಗಿದು, ಅಶ್ರುವಾಯು ಸಿಡಿಸಿದ್ದಾರೆ. ತಮ್ಮ ಕೈಯಲ್ಲಿದ್ದ ಸಾಧನಗಳಿಂದ ಫ್ಲೋರೊಸೆಂಟ್ ಬಣ್ಣದ ಅನಿಲವನ್ನು ಸಿಂಪಡಿಸುತ್ತಾ ಸೆರೆಹಿಡಿಯುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರು ಎಂದು ಕೆಲವು ಮೂಲಗಳು ತಿಳಿಸಿವೆ.ಹಳದಿ ಹೊಗೆಯನ್ನು ಹೊರಸೂಸುವ ಸ್ಪ್ರೇ ಗಳನ್ನು ಸಿಂಪಡಿಸಿದ್ದಾರೆ. ಇನ್ನೂ, ಕ್ಯಾನ್ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಪ್ರತಿಭಟನಾಕಾರರನ್ನು ಸಂಸತ್ತಿನ ಹೊರಗೆ ಬಂಧಿಸಲಾಯಿತು. ಒಳನುಗ್ಗಿದ ವ್ಯಕ್ತಿಗಳು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಸಂಸದರು ಮತ್ತು ಭದ್ರತಾ ಸಿಬ್ಬಂದಿ ಆ ವ್ಯಕ್ತಿಗಳನ್ನು ಹಿಡಿದು ವಿಚಾರಣೆ ಆರಂಭಿಸಿದ್ದಾರೆ.
https://twitter.com/ANI/status/1734842655962693883?ref_src=twsrc%5Etfw%7Ctwcamp%5Etweetembed%7Ctwterm%5E1734842655962693883%7Ctwgr%5Eb129ad957c2279c55c3046e496428bf6bfc7d1bd%7Ctwcon%5Es1_&ref_url=https%3A%2F%2Fvistaranews.com%2Fnational%2Fhuge-security-breach-in-lok-sabha%2F531618.html