ಎಂಎಸ್ಸಿ ನರ್ಸಿಂಗ್ ಸೇರಿ ಹಲವು ಕೋರ್ಸ್ ಸೀಟು ಹಂಚಿಕೆ: ಆಯ್ಕೆ ದಾಖಲಿಸಲು ಅವಕಾಶ

ಬೆಂಗಳೂರು: MSc(Nursing), MPT, MSc AHS, PB http://B.Sc Nursing, http://B.Sc AHS (Lateral Entry) ಕೋರ್ಸುಗಳ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.30ರ ಮಧ್ಯಾಹ್ನ 3ಗಂಟೆವರೆಗೆ ಅವಕಾಶ ನೀಡಲಾಗಿದೆ.

ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಅ.30ರ ರಾತ್ರಿ 8ರ ನಂತರ ಹಾಗೂ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ಅ.31ರ ಬೆಳಿಗ್ಗೆ 11 ನಂತರ ಪ್ರಕಟಿಸಲಾಗುವುದು.

ಶುಲ್ಕ ಪಾವತಿ ಹಾಗೂ ದೃಢೀಕರಣ ಚೀಟಿ ಡೌನ್ ಲೋಡ್ ಮಾಡಿಕೊಳ್ಳಲು ನ.1ರಿಂದ ನ.5ರ ಸಂಜೆ 4ಗಂಟೆವರೆಗೆ ಅವಕಾಶವಿರುತ್ತದೆ. ಹಿಂದಿನ ಸುತ್ತಿನಲ್ಲಿ ಶುಲ್ಕ ಪಾವತಿಸಿದ್ದರೆ ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಸೀಟು ಹಂಚಿಕೆಯಾದವರು ನ.5ರ ಸಂಜೆ 6ರೊಳಗೆ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.

ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಥವಾ ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ದೃಢಪಟ್ಟಲ್ಲಿ ಯಾವುದೇ ಕಾರಣಕ್ಕೂ ಬದಲಿಸಿಕೊಳ್ಳಲು ಅಥವಾ ರದ್ದುಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ, ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ದಾಖಲಿಸುವ ಮುನ್ನ ಪೋಷಕರೊಡನೆ ಚರ್ಚಿಸಿ ನಮೂದಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read