ಬೆಂಗಳೂರು : ರಾಜ್ಯದ ಶಾಲೆಗಳ ವಿದ್ಯಾರ್ಥಿಗಳಿಗೆ ʻಪೋಕ್ಸೋ ಕಾಯ್ದೆʼಯ ಬಗ್ಗೆ ʻತೆರೆದ ಮನೆʼ ಕಾರ್ಯಕ್ರಮದಡಿ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳಂತಹ ದುರ್ಘಟನೆಗಳನ್ನು ತಡೆಗಟ್ಟಲು ಹಾಗೂ ಮಕ್ಕಳಿಗೆ ರಕ್ಷಣೆ, ಭದ್ರತೆ ಮತ್ತು ನ್ಯಾಯ ಒದಗಿಸುವುದರ ಜೊತೆಗೆ ಅವರ ಆಸಕ್ತಿ ಮತ್ತು ಹಿತ ಕಾಪಾಡುವ ಉದ್ದೇಶಗಳನ್ನು ಇರಿಸಿಕೊಂಡು ಪೋಕ್ಸೋ ಕಾಯಿದೆ-2012 ” ಅನ್ನು ಉಲ್ಲೇಖ-1ರನ್ವಯ ಭಾರತ ಸರ್ಕಾರವು ಜಾರಿಗೆ ತಂದಿರುತ್ತದೆ.
ರಾಜ್ಯದಲ್ಲಿನ ಪ್ರತಿಯೊಂದು ಮಗುವು ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ ರೀತಿಯ ಹಿಂಸೆ, ನಿರ್ಲಕ್ಷ್ಯ ಮತ್ತು ಶೋಷಣೆಯಿಂದ ರಕ್ಷಣೆ ಮತ್ತು ಸುರಕ್ಷತೆಯನ್ನು ನೀಡುವ ಸಲುವಾಗಿ ಹಾಗೂ ಎಲ್ಲಾ ಸಾಮಾಜಿಕ ವಲಯಗಳು ವಿಶೇಷವಾಗಿ ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಭದ್ರತೆ ಮತ್ತು ಸಾಮಾಜಿಕ ನ್ಯಾಯ ಇವುಗಳನ್ನು ಮಕ್ಕಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಗೂ ಲಿಂಗತ್ವ, ನಾಗರೀಕತೆಯೂ ಸೇರಿದಂತೆ ಎಲ್ಲಾ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅಥವಾ ಬೌಗೋಳಿಕ ತಾರತಮ್ಯಗಳನ್ನು ತೊಡೆದು ಹಾಕುವ ಉದ್ದೇಶಗಳಿಂದ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ನ್ನು ರಾಜ್ಯ ಸರ್ಕಾರವು ಉಲ್ಲೇಖ-2ರನ್ವಯ ಜಾರಿಗೊಳಿಸಿರುತ್ತದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ” ಪೋಕ್ಸೋ ಕಾಯಿದೆ 2012″ ಮತ್ತು “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016” ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು, ಶಾಲೆಗಳು, ಆಡಳಿತ ಮಂಡಳಿಗಳು, ಪೋಷಕರು ಎಸ್.ಡಿ.ಎಂ.ಸಿ ಹಾಗೂ ಇತರರು ಸೇರಿದಂತೆ ಎಲ್ಲಾ ಪಾಲುದಾರರು/ ಭಾಗಿದಾರರು (All Stake holders) ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಪ್ರಮಾಣೀಕೃತ ಕಾರ್ಯಚರಣಾ ವಿಧಾನ (SOP) ಅನ್ನು ಮತ್ತು ಮಾರ್ಗಸೂಚಿಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಉಲ್ಲೇಖ-3ರನ್ವಯ ಹೊರಡಿಸಿರುತ್ತದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ” ಪೋಕ್ಸೋ ಕಾಯಿದೆ 2012″ ಮತ್ತು “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016′ ಇವುಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಅರಿವು ಮೂಡಿಸಲು ಹಾಗೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಎಲ್ಲಾ ಪಾಲುದಾರರು/ ಭಾಗಿದಾರರು (All Stake holders) ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಲ್ಲೇಖ-4 ರನ್ವಯ ವಿಸ್ತ್ರತವಾಗಿ ತಿಳಿಸಲಾಗಿರುತ್ತದೆ.