ಖಾಸಗಿ ಶಾಲೆ, ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಣ ಕಾನೂನು ಜಾರಿಗೆ ಪೋಷಕರ ಒತ್ತಾಯ

ಬೆಂಗಳೂರು: ಖಾಸಗಿ ಶಾಲೆ, ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಣ ಕಾನೂನು ಜಾರಿ ಮಾಡುವಂತೆ ಒತ್ತಾಯಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯಿಂದ ಮನವಿ ಮಾಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ವತಿಯಿಂದ ಖಾಸಗಿ ಶಾಲೆಗಳಲ್ಲಿ ಮಕ್ಕಳು ಮತ್ತು ಪೋಷಕರ ಹಿತರಕ್ಷಣೆಗಾಗಿ ಶಾಲಾ ಶುಲ್ಕ ನಿಯಂತ್ರಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ.

ಶಿಕ್ಷಣ ಇಲಾಖೆ ಸಿದ್ಧಪಡಿಸಿದ 1600 ಅನಧಿಕೃತ ಶಾಲೆಗಳ ಪಟ್ಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವೇದಿಕೆಯ ಅಧ್ಯಕ್ಷ ಬಿ.ಎಲ್. ಯೋಗಾನಂದ್ ಅವರ ನೇತೃತ್ವದ ನಿಯೋಗ ಕೋರಿದೆ.

ಶಾಲೆಗಳಲ್ಲಿ ಶುಲ್ಕಬಾಕ ಸಂಸ್ಕೃತಿ ಮಿತಿಮೀರಿದ್ದು, ಆಡಳಿತ ಮಂಡಳಿಗಳು ಡೊನೇಷನ್, ಕ್ಯಾಪಿಟೇಶನ್ ಶುಲ್ಕ, ಬೋಧನಾ ಶುಲ್ಕ, ಪಠ್ಯಪುಸ್ತಕ, ಸಮವಸ್ತ್ರ, ಸಾರಿಗೆ, ಶೂ, ಸಾಕ್ಸ್ ಮೊದಲಾದ ಹೆಸರಲ್ಲಿ ಪೋಷಕರನ್ನು ಕಿತ್ತು ತಿನ್ನುತ್ತಿವೆ. ಇದನ್ನು ನಿಯಂತ್ರಿಸಲು ತಮಿಳುನಾಡು, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ಶುಲ್ಕ ನಿಯಂತ್ರಣ ಸಂಹಿತೆ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read