BREAKING: ಕನ್ನಡ ಸೇರಿ ಬಹುಭಾಷೆಗಳಲ್ಲಿ ನಟಿಸಿದ್ದ ಖ್ಯಾತ ನಟ ಸಯಾಜಿ ಶಿಂಧೆ NCP ಸೇರ್ಪಡೆ

ಮುಂಬೈ: ಕನ್ನಡ, ಹಿಂದಿ, ತೆಲುಗು ಸೇರಿ ಹಲವಾರು ಭಾಷೆ ಚಿತ್ರಗಳಲ್ಲಿ ನಟಿಸಿರುವ ನಟ ಸಯಾಜಿ ಶಿಂಧೆ ಅವರು ಶುಕ್ರವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಅವರು ಪಕ್ಷ ಸೇರಿದ್ದು, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ನಟ ಕಮ್ ರಾಜಕಾರಣಿ ಶಿಂಧೆ ಅವರು ಬಹಳ ಹಿಂದಿನಿಂದಲೂ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಅವರು “ರಾಜಕೀಯ ವ್ಯವಸ್ಥೆಗೆ” ಬಂದಿದ್ದು, ಸಮಾಜ ಸೇವೆ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಅಜಿತ್ ಪವಾರ್ ಅವರನ್ನು ಶ್ಲಾಘಿಸಿದ ಶಿಂಧೆ, ಅವರ ಪಕ್ಷದ ನೀತಿಗಳು ಆಕರ್ಷಕವಾಗಿವೆ, ಅದಕ್ಕಾಗಿಯೇ ಅವರ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

‘ಚಿತ್ರಗಳಲ್ಲಿ ರಾಜಕಾರಣಿಗಳ ಪಾತ್ರ ಮಾಡಿದ್ದೇನೆ, ಆದರೆ ಇನ್ನೂ ರಾಜಕಾರಣಿಯಾಗಿಲ್ಲ, ನಾನು ಮಾಡುತ್ತಿರುವ ಸಮಾಜಮುಖಿ ಕೆಲಸಗಳು ಹೊರಗೆ ಉಳಿಯುವ ಬದಲು ವ್ಯವಸ್ಥೆಗೆ ಬಂದು ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದು ಎಂದು ಯೋಚಿಸುವಂತೆ ಮಾಡಿದೆ. ಅದಕ್ಕಾಗಿಯೇ ನಾನು ಅಜಿತ್ ಪವಾರ್ ಅವರ ಎನ್‌ಸಿಪಿಯ ನೀತಿಗಳನ್ನು ಇಷ್ಟಪಟ್ಟೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read