ಈ ಮನೆಮದ್ದಿನ ಮೂಲಕ ಎರಡೇ ದಿನಗಳಲ್ಲಿ ಮೊಡವೆಗೆ ಹೇಳಿ ʼಗುಡ್​ ಬೈʼ….!

ಒಂದು ಮೊಡವೆ ಮುಖದ ಮೇಲೆ ಮೂಡಿದರೂ ಸಾಕು. ಮಹಿಳೆಯರಿಗೆ ಕಿರಿಕಿರಿ ಎನಿಸೋಕೆ ಶುರುವಾಗುತ್ತೆ. ತ್ವಚೆಯು ಕಾಂತಿಯುತವಾಗಿ ಇರಬೇಕು ಎಂಬ ಆಸೆ ಎಲ್ಲರಿಗೂ ಇರುವ ಕಾರಣ ಖಂಡಿತವಾಗಿಯೂ ಮೊಡವೆ ಹಾಗೂ ಮೊಡವೆ ಕಲೆಗಳನ್ನ ನಿವಾರಿಸೋದು ಮಹಿಳೆಯರಿಗೆ ದೊಡ್ಡ ಸವಾಲೇ ಸರಿ. ಆದರೆ ಇದಕ್ಕಾಗಿ ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮದೇ ಮನೆಯಲ್ಲಿರುವ ಟೂತ್​ ಪೇಸ್ಟ್​ನ ಸಹಾಯದಿಂದ ಮೊಡವೆಗೆ ಗುಡ್​ ಬೈ ಹೇಳಬಹುದು.

ರಾತ್ರಿ ಮಲಗುವ ಮುನ್ನ ಸ್ವಚ್ಛ ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ. ಇದಾದ ಬಳಿಕ ಮುಖಕ್ಕೆ ನಿಮ್ಮಿಷ್ಟದ ಟೋನರ್​ ಸಿಂಪಡಣೆ ಮಾಡಿ. ಟೋನರ್​ ಸಿಗದೇ ಹೋದಲ್ಲಿ ರೋಸ್​ ವಾಟರ್​ನ್ನು ನೀವು ಬಳಕೆ ಮಾಡಬಹುದು. ಇದಾದ ಬಳಿಕ ಅರ್ಧಚಮಚ ಅಡುಗೆ ಸೋಡಾ ಸ್ವಲ್ಪ ಟೂತ್​ ಪೇಸ್ಟ್​ ಮಿಶ್ರಣ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

ಬೆಳಗ್ಗೆ ಎದ್ದ ತಕ್ಷಣ ಮುಖವನ್ನ ತೊಳೆದು ಬಳಿಕ ನಿಮ್ಮಿಷ್ಟದ ಮಾಯಿಶ್ಚರೈಸರ್​ ಹಚ್ಚಿಕೊಳ್ಳಿ. ಟೂತ್​ಪೇಸ್ಟ್​ನಲ್ಲಿರುವ ಟ್ರಿಕ್ಲೋಷೆನ್​ ಎಂಬ ಅಂಶವು ಮೊಡವೆ ಗಾಯವನ್ನ ಕಡಿಮೆ ಮಾಡಲು ಸಹಕಾರಿಯಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ನೀವು ಮೊಡವೆ ಸಮಸ್ಯೆಯಿಂದ ಮುಕ್ತಿ ಕಾಣುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read