ನಿಮ್ಮ ʼಲಿವರ್‌ʼ ಬಗ್ಗೆ ಇರಲಿ ಜಾಗೃತಿ; ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಕೇವಲ ಮದ್ಯಪಾನಿಗಳಿಗೆ ಮಾತ್ರವೇ ಯಕೃತ್ತಿನ (ಲಿವರ್‌) ಸಮಸ್ಯೆ ಉಂಟಾಗುತ್ತದೆ ಎಂಬ ಭ್ರಮೆಯಲ್ಲಿ ನೀವಿದ್ದರೆ, ಅದು ತಪ್ಪು. ಆಧುನಿಕ ಜೀವನಶೈಲಿ, ಜಂಕ್‌ ಫುಡ್‌ಗಳಿಂದ ಯಾರಿಗಾದರೂ ಲಿವರ್‌ ಸಮಸ್ಯೆ, ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಹಾಗಾಗಿ ಲಿವರ್‌ನಲ್ಲಿ ಅನಗತ್ಯ ಅಥವಾ ಅಪಾಯಕಾರಿ ಕೊಬ್ಬಿನ ಅಂಶ ಮಿತಿಮೀರದಂತೆ ಎಚ್ಚರ ವಹಿಸಬೇಕಾಗುತ್ತದೆ.

ಲಿವರ್‌ ಅಥವಾ ಯಕೃತ್ತಿನ ಪ್ರಮುಖ ಕೆಲಸ ಎಂದರೆ ದೇಹದಲ್ಲಿನ ರಕ್ತದಲ್ಲಿ ಇರುವ ಕೊಬ್ಬಿನಂಶವನ್ನು ವಿಂಗಡಿಸುವುದು. ಅಂದರೆ ಕೊಬ್ಬನ್ನು ಕುಟ್ಟಿ ಪುಡಿ ಮಾಡುವುದು. ಮದ್ಯಪಾನ ಮಾಡದಿದ್ದರೂ ಲಿವರ್‌ನಲ್ಲಿ ಅಪಾಯಕಾರಿ ಕೊಬ್ಬಿನಂಶ ಸಂಗ್ರಹವಾಗಿದೆ ಎಂದರೆ, ಅದಕ್ಕೆ ಕಾರಣ ವ್ಯಾಯಾಮ ರಹಿತ ಜೀವನಶೈಲಿ. ಪರಿಣಾಮ ‘ಸ್ಥೂಲಕಾಯ’ ಸಮಸ್ಯೆ.

ಇಂಥ ಸಂದರ್ಭಗಳಲ್ಲಿ ಲಿವರ್‌ ತನ್ನ ಕೆಲಸ ಮಾಡಲು ಎಡವುತ್ತದೆ. ಆಗ ರಕ್ತದಲ್ಲಿ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ಅಪಾಯ ಉಂಟಾಗುತ್ತದೆ. ಇದರ ಮುನ್ನೆಚ್ಚರಿಕೆಯನ್ನು ಕೂಡ ದೇಹವು ಆಗಾಗ್ಗೆ ಕೊಡುತ್ತಿರುತ್ತದೆ ಎನ್ನುತ್ತಾರೆ ತಜ್ಞವೈದ್ಯರು.

ಹೊಟ್ಟೆಯ ಮೇಲ್ಭಾಗದಲ್ಲಿ ಆಗಾಗ್ಗೆ ನೋವು, ವಿಪರೀತ ಸುಸ್ತಾಗುವುದು ಮುನ್ನೆಚ್ಚರಿಕೆ ಲಕ್ಷಣಗಳಂತೆ. ಇನ್ನೂ ಒಂದು ಪ್ರಮುಖ ಮುನ್ನೆಚ್ಚರಿಕೆ ಚಿಹ್ನೆಯನ್ನು ದೇಹ ಕೊಡುತ್ತದೆಯಂತೆ, ಅದೇನೆಂದರೆ ಚರ್ಮದ ಬಣ್ಣ.

ಕೆಂಪು ಬಣ್ಣದ ತುರಿಕೆ, ಗಿಬರುವಿಕೆಗಳು. ಇದರಿಂದ ಹೆಚ್ಚು ರಕ್ತ ಸೋರಿಕೆ ಆಗದಿದ್ದರೂ, ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಪ್ರೊಟೀನ್‌ಗಳು ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿಲ್ಲ ಎನ್ನುವುದರ ಪ್ರತೀಕವು ಇದಾಗಿದೆ.

ಮತ್ತೊಂದು ಚರ್ಮದ ಬಣ್ಣ ಎಂದರೆ ’ಹಳದಿ’. ಕಣ್ಣಿನ ಒಳಗಿನ ಬಿಳಿ ಭಾಗ ಹಳದಿ ಆಗುತ್ತಾ ಹೋಗುತ್ತದೆ. ರಕ್ತದಲ್ಲಿನ ಕೆಂಪು ರಕ್ತ ಕಣಗಳನ್ನು ವಿಂಗಡಿಸುವ, ಲಿವರ್‌ನಲ್ಲಿ ಉತ್ಪತ್ತಿಯಾಗುವ ’ಬಿಲಿರುಬಿನ್‌’ ದ್ರವ್ಯದ ವಿಪರೀತ ಹೆಚ್ಚಳವೇ ಇದಕ್ಕೆ ಕಾರಣ.

ಈ ಎರಡು ಲಕ್ಷಣಗಳು ಗೋಚರವಾದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಆರಂಭಿಸಿದರೆ ಆರೋಗ್ಯಕರ ಜೀವನ ನಿಮ್ಮದಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read