ದುಬೈಗೆ ಆಗಮಿಸಿದ ಪ್ರಧಾನಿ ಮೋದಿ ವಿಮಾನಕ್ಕೆ ಸೌದಿಯ ಯುದ್ಧ ವಿಮಾನಗಳು ಬೆಂಗಾವಲಾಗಿ ನಿಂತಿದ್ದು, ವೀಡಿಯೋ ವೈರಲ್ ಆಗಿದೆ.
ಸೌದಿ ಅರೇಬಿಯಾಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ಸೌದಿ ಅರೇಬಿಯಾದ ಯುದ್ಧ ವಿಮಾನಗಳು ಮಂಗಳವಾರ ವಿಶೇಷ ರಾಜತಾಂತ್ರಿಕ ಸಂಕೇತವಾಗಿ ಬೆಂಗಾವಲು ನೀಡಿವೆ.
ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನೀಡಲಾಗಿದ್ದು, ಪ್ರಧಾನಿಯಾಗಿ ಮೋದಿ ಅವರ ಮೂರನೇ ಭೇಟಿ ಮತ್ತು ನಾಲ್ಕು ದಶಕಗಳಲ್ಲಿ ಜೆಡ್ಡಾಗೆ ಭಾರತೀಯ ನಾಯಕರೊಬ್ಬರು ನೀಡಿದ ಮೊದಲ ಭೇಟಿಯಾಗಿದೆ.
ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತ-ಸೌದಿ ಸಂಬಂಧಗಳನ್ನು ಆಳಗೊಳಿಸಲು 2019 ರಲ್ಲಿ ಸ್ಥಾಪಿಸಲಾದ ದ್ವಿಪಕ್ಷೀಯ ಕಾರ್ಯವಿಧಾನವಾದ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಕೌನ್ಸಿಲ್ನ ಎರಡನೇ ಸಭೆಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡೂ ಕಡೆಯವರು ಕನಿಷ್ಠ ಆರು ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಒಪ್ಪಂದಗಳು ಇಂಧನ, ವ್ಯಾಪಾರ ಮತ್ತು ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರವನ್ನು ನೀಡುವ ಗುರಿಯನ್ನು ಹೊಂದಿವೆ.