‘ಶನಿ ದೋಷ’ ಕಳೆದು ಜೀವನದಲ್ಲಿ ಏಳಿಗೆ ಕಾಣಲು ಅನುಸರಿಸಿ ಈ ವಿಧಾನ

ನಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಲು ಜಾತಕದಲ್ಲಿರುವ ಶನಿ ದೋಷ ಕೂಡ ಕಾರಣವಾಗುತ್ತದೆ. ನಮ್ಮ ಮೇಲೆ ಶನಿದೇವರು ಕೆಟ್ಟ ದೃಷ್ಟಿ ಹಾಯಿಸಿದರೆ  ಜೀವನದಲ್ಲಿ ಹಣಕಾಸಿನ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ ಸಮಸ್ಯೆ ಹೀಗೆ ಹಲವಾರು ಸಮಸ್ಯೆ ಕಾಡುತ್ತದೆ. ಈ ಶನಿದೋಷವನ್ನು ನಿವಾರಿಸಲು ಕಪ್ಪು ಎಳ್ಳು ಮತ್ತು ಅನ್ನದಿಂದ ಈ ಪರಿಹಾರವನ್ನು ಮಾಡಿ.

ಶನಿವಾರದಂದು ನಿತ್ಯ ಪೂಜೆ ಮಾಡಿ. ಬಳಿಕ ಮಧ್ಯಾಹ್ನದ ವೇಳೆ ಅಡುಗೆ ಮಾಡಿದ ಬಳಿಕ ಬಿಳಿ ಅನ್ನದಿಂದ ಮೂರು ಮುದ್ದೆಗಳನ್ನು ಮಾಡಬೇಕು. ಆನಂತರ ಕಪ್ಪು ಎಳ್ಳನ್ನು ಎಣ್ಣೆಯಲ್ಲಿ ಹುರಿಯಬೇಕು ಬಳಿಕ ಅದನ್ನು ಅನ್ನದ ಉಂಡೆಗಳ ಮೇಲೆ ಹಾಕಿ ಕಾಗೆಗಳಿಗೆ ಹಾಕಿ. ಇದನ್ನು ಕಾಗೆಗಳು ಸೇವಿಸಿದರೆ ನಿಮ್ಮ ಮೇಲೆ ಶನಿದೇವರ ಅನುಗ್ರಹ ದೊರೆತು ನಿಮ್ಮ ಕಷ್ಟಗಳು, ಪಾಪ ಕರ್ಮಗಳು ನಿವಾರಣೆಯಾಗುತ್ತದೆ. ಜೀವನದಲ್ಲಿ ಏಳಿಗೆ ಕಾಣುತ್ತೀರಿ.

ಹಾಗೇ ಈ ಅನ್ನದ ಮುದ್ದೆಗಳನ್ನು ಕಾಗೆ ತಕ್ಷಣ ಬಂದು ಸೇವಿಸಿದರೆ ನಿಮ್ಮ ಕಷ್ಟಗಳು ಅತಿ ಶೀಘ್ರದಲ್ಲಿ ತೊಲಗುತ್ತೆ ಎಂದರ್ಥ. ಒಂದು ವೇಳೆ ಕಾಗೆ ತಡವಾಗಿ ಬಂದು ಸೇವಿಸಿದರೆ ನಿಮ್ಮ ಕಷ್ಟಗಳು ತೊಲಗಲು ಸ್ವಲ್ಪ ಸಮಯಬೇಕು ಎಂದರ್ಥ. ಅಲ್ಲದೇ ಒಂದು ವೇಳೆ ಕಾಗೆಗಳು ಸೇವಿಸಿಲ್ಲವಾದರೆ ಶನಿ ಕೃಪೆಗಾಗಿ ನೀವು ಇನ್ನೂ ಪ್ರಯತ್ನಿಸಬೇಕು. ಯಾವುದಾದರೂ ಕಪ್ಪು ಬಣ್ಣದ ಪ್ರಾಣಿ ಅಥವಾ ಪಕ್ಷಿಗಳಿಗೆ ಇದನ್ನು ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read