ಇತ್ತೀಚಿಗಷ್ಟೇ ನಿಧನರಾದ ನಟ ಸತೀಶ್ ಕೌಶಿಕ್ ಅವರದ್ದು ಸಾವಲ್ಲ, ಕೊಲೆ ಎಂಬ ಆರೋಪದ ಬಗ್ಗೆ ಕೌಶಿಕ್ ಅವರ ಪತ್ನಿ ಶಶಿ ಕೌಶಿಕ್ ಕೊನೆಗೂ ಬಾಯ್ಬಿಟ್ಟಿದ್ದಾರೆ. ಇದೆಲ್ಲಾ ಸುಳ್ಳು, ಸತ್ಯಕ್ಕೆ ದೂರವಾದದ್ದು ಎಂದು ವದಂತಿಯನ್ನ ಅಲ್ಲಗಳೆದಿದ್ದಾರೆ.
ತಮ್ಮ ಪತಿಯನ್ನ ಉದ್ಯಮಿ ವಿಕಾಸ್ ಮಾಲು ಹತ್ಯೆ ಮಾಡಿದ್ದಾರೆ ಎಂಬ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ. ಉದ್ಯಮಿ ವಿಕಾಸ್ ಮಾಲು ಎರಡನೇ ಪತ್ನಿ ಆತನ ವಿರುದ್ಧ ಈ ರೀತಿ ಆರೋಪಗಳನ್ನು ಮಾಡಿದ್ದಾರೆ. 15 ಕೋಟಿ ರೂಪಾಯಿ ಸಾಲದ ಕಾರಣಕ್ಕಾಗಿ ಸತೀಶ್ ಕೌಶಿಕ್ ಅವರನ್ನು ತನ್ನ ಪತಿ ವಿಕಾಸ್ ಮಾಲು ಕೊಲೆ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದರು.
ಆ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿ ಕೌಶಿಕ್, ಇದು ಸಂಪೂರ್ಣ ಸುಳ್ಳು. ಜಗಳ ನಡೆದಿಲ್ಲ, ಸುಳ್ಳು ಆರೋಪ ಮಾಡಿದ್ದಾಳೆ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಕೌಶಿಕ್ ಹೃದಯ ಶೇ.98 ಬ್ಲಾಕ್ ಆಗಿದೆ ಎಂದು ಹೇಳಲಾಗಿದೆ. ಆರೋಪ ಮಾಡಿರುವ ಮಹಿಳೆ, ತನ್ನ ಪತಿಯಿಂದ ಬೇರ್ಪಟ್ಟಿದ್ದಾರೆ. ಆದ್ದರಿಂದ ಸಹಾನುಭೂತಿ ಪಡೆಯಲು ಅಥವಾ ಈ ವಿಷಯದಲ್ಲಿ ಅವನನ್ನು ತೊಂದರೆಗೆ ಸಿಲುಕಿಸಲು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಈ ಆರೋಪಗಳು ಸುಳ್ಳಾಗಿದ್ದು ಮರಣೋತ್ತರ ಪರೀಕ್ಷೆಯ ವರದಿಯು ನೈಸರ್ಗಿಕ ಹೃದಯ ಸ್ತಂಭನವಾಗಿದೆ ಎಂದು ಹೇಳಿದೆ. ವಿಕಾಸ್ ಮಾಲು ಬಳಿ ತಮ್ಮ ಯಾವುದೇ ಹಣವಿಲ್ಲ ಮತ್ತು ಅವರು ಹಣಕ್ಕಾಗಿ ಕೊಲೆಗೆ ಯೋಜಿಸಲು ಸಾಧ್ಯವಿಲ್ಲ. ಯಾಕೆಂದ್ರೆ ಅವರೇ ತುಂಬಾ ಶ್ರೀಮಂತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
https://twitter.com/ABPNews/status/1634826258004549633?ref_src=twsrc%5Etfw%7Ctwcamp%5Etweetembed%7Ctwterm%5E1634826258004549633%7Ctwgr%5Ee1a923fdc214979ee1e66657a8ec49f10f592dd3%7Ctwcon%5Es1_&ref_url=https%3A%2F%2Fwww.bollywoodlife.com%2Fnews-gossip%2Fsatish-kaushiks-wife-finally-breaks-silence-on-her-husband-being-murdered-by-businessman-vikas-malu-entertainment-news-2367837%2F