ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ಅವರ ʼಜರಾ ಹಟ್ಕೆ ಜರಾ ಬಚ್ಕೆʼ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಚಾರದ ಭಾಗವಾಗಿ ನಟಿ ಹಲವಾರು ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ್ದರು.
ಈಗ ಚಿತ್ರ ಬಿಡುಗಡೆಯಾದ ನಂತರ ಸಾರಾ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಸಾರಾ ಅಲಿಖಾನ್ ಭೇಟಿ ನೀಡಿರುವ ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.
ವೈರಲ್ ವೀಡಿಯೊದಲ್ಲಿ, ಸಾರಾ ತನ್ನ ಹಣೆಯ ಮೇಲೆ ಸಿಂಧೂರವಿಟ್ಟಿದ್ದು ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಸಾರಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ ಸಾರಾ, ʼಜರಾ ಹಟ್ಕೆ ಜರಾ ಬಚ್ಕೆʼ ಚಿತ್ರದಲ್ಲಿನ ತಮ್ಮ ಸಹನಟ ವಿಕ್ಕಿ ಕೌಶಲ್ ಅವರೊಂದಿಗೆ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಾರಾ ಅಲಿಖಾನ್ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಕಾರಣಕ್ಕಾಗಿ ಹಲವು ಬಾರಿ ಟ್ರೋಲ್ ಗೊಳಗಾಗಿದ್ದಾರೆ.
https://twitter.com/ANI_MP_CG_RJ/status/1672634743240925184?ref_src=twsrc%5Etfw%7Ctwcamp%5Etweetembed%7Ctwterm%5E1672634743240925184%7Ctwgr%5E87a95e6879f0649ee2d5c6dbce513857cab4d877%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Frepublictv-epaper-dh4cc384888f0f4e69bffec2529fceb0e8%2Fsaraalikhanvisitsmahakaleshwartempleinujjain-newsid-n512560240