ತ್ವಚೆಯ ಸರ್ವ ಸಮಸ್ಯೆ ನಿವಾರಣೆಗೆ ಬೆಸ್ಟ್ ಶ್ರೀಗಂಧ

ಹಲವು ಚರ್ಮ ರೋಗಗಳಿಗೆ ಶ್ರೀಗಂಧ ಮದ್ದು. ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಸುವಾಸನಾ ಭರಿತ ಶ್ರೀ ಗಂಧದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ದಿನನಿತ್ಯ ಇದನ್ನು ತೇದು ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತ ಮೊಗ ನಿಮ್ಮದಾಗುತ್ತದೆ.

ಚರ್ಮದ ಅಲರ್ಜಿ ಇರುವವರು ಪ್ರತಿನಿತ್ಯ ಇದನ್ನು ಲಿಂಬೆರಸದಲ್ಲಿ ತೇದು ಹಚ್ಚುವುದರಿಂದ ಅಲರ್ಜಿ ಕಡಿಮೆಯಾಗುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ತೇದ ಗಂಧದೊಂದಿಗೆ ಬೆರೆಸಿ ಮುಖ, ಕುತ್ತಿಗೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತೊಳೆದರೆ ಮೊಡವೆ ದೂರವಾಗುತ್ತದೆ, ಅಲ್ಲದೆ ಮುಖವೂ ಸ್ವಚ್ಛವಾಗುತ್ತದೆ.

ಮೊಸರಿನಲ್ಲಿ ಶ್ರೀಗಂಧವನ್ನು ತೇದು ಹಚ್ಚಿಕೊಂಡರೆ ಕಜ್ಜಿ ಸಿಬ್ಬುವಿನಂತಹ ಸಮಸ್ಯೆಗಳು ದೂರವಾಗುತ್ತವೆ. ಗಂಧದ ಚೆಕ್ಕೆ ಹಾಕಿ ಕುದಿಸಿ ಆರಿಸಿದ ನೀರಿನ ಸ್ನಾನದಿಂದ ಚರ್ಮರೋಗಗಳು ನಿವಾರಣೆಯಾಗುತ್ತದೆ.

ನೆನೆಪಿರಲಿ ಯಾವುದೇ ಕಾರಣಕ್ಕೆ ಅಂಗಡಿಯಲ್ಲಿ ಸಿಗುವ ಕೃತಕ ಗಂಧದ ಪುಡಿಯನ್ನು ಬಳಸದಿರಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read