ಮಾಜಿ ಪತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಮಂತಾ…! ಅದಕ್ಕೆ ಬಂದ ಪ್ರತಿಕ್ರಿಯೆ ಏನು ಗೊತ್ತಾ ?

ನಟಿ ಸಮಂತಾ, ತಮ್ಮ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕವೂ ಮಾಜಿ ಪತಿಯ ಸಹೋದರ ಅಖಿಲ್ ಅಕ್ಕಿನೇನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಖಿಲ್ ಅಕ್ಕಿನೇನಿ ಅವರಿಗೆ ಸಮಂತಾ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

ಶನಿವಾರದಂದು instagram ನಲ್ಲಿ ಹುಟ್ಟು ಹಬ್ಬದ ಪೋಸ್ಟ್ ಹಾಕಿರುವ ಸಮಂತಾ, ಅಖಿಲ್ ಅಕ್ಕಿನೇನಿ ಅವರ ಮುಂಬರುವ ಚಿತ್ರ ʼಏಜೆಂಟ್ʼ ಪೋಸ್ಟರ್ ಹಂಚಿಕೊಂಡಿದ್ದಾರೆ. ಅಲ್ಲದೆ ‘ಹ್ಯಾಪಿ ಬರ್ತಡೆ ಅಖಿಲ್ ಅಕ್ಕಿನೇನಿ. ‘ಏಜೆಂಟ್’ ಚಿತ್ರ 28ಕ್ಕೆ. ಶುಭವಾಗಲಿʼ ಎಂದು ಹಾರೈಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಅಖಿಲ್ ಅಕ್ಕಿನೇನಿ, ʼಥ್ಯಾಂಕ್ಯೂ ಸೋ ಮಚ್ ಸ್ಯಾಮ್. ಏಜೆಂಟ್ ಚಿತ್ರದ ಕುರಿತ ನಿನ್ನ ನಿರೀಕ್ಷೆಯನ್ನು ತಲುಪಲು ಯತ್ನಿಸುತ್ತೇನೆʼ ಎಂದಿದ್ದಾರೆ. ಸಮಂತಾ ಅವರನ್ನು ಅಕ್ಕಿನೇನಿ ಕುಟುಂಬಸ್ಥರು ಸ್ಯಾಮ್ ಎಂದೇ ಈಗಲೂ ಪ್ರೀತಿಯಿಂದ ಕರೆಯುತ್ತಾರೆ.

ಐದು ವರ್ಷಗಳ ದಾಂಪತ್ಯ ಜೀವನ ನಡೆಸಿದ ನಾಗಚೈತನ್ಯ ಹಾಗೂ ಸಮಂತಾ 2021 ರ ಅಕ್ಟೋಬರ್ ನಲ್ಲಿ ತಾವಿಬ್ಬರು ಬೇರೆಯಾಗುವ ನಿರ್ಧಾರವನ್ನು ಘೋಷಿಸಿದ್ದರು. ಆದರೆ ಈವರೆಗೂ ಕೂಡ ಅದರ ಹಿಂದಿನ ಕಾರಣವನ್ನು ನಾಗಚೈತನ್ಯ ಅವರಾಗಲಿ ಅಥವಾ ಸಮಂತಾ ಅವರಾಗಲಿ ಬಿಟ್ಟು ಕೊಟ್ಟಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read