ಜೀವ ಬೆದರಿಕೆ ನಡುವೆಯೂ ವಿದೇಶಕ್ಕೆ ತೆರಳಿದ ಸಲ್ಮಾನ್; ʼಟೈಗರ್ ಈಸ್ ಅಲೈವ್ʼ ಎಂದ ಯುಕೆ ಸಂಸದ…!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಬಳಿಕ ಆತಂಕದಲ್ಲಿದ್ದ ಅವರ ಅಭಿಮಾನಿಗಳಿಗೆ ಯುಕೆ ಸಂಸದ ಬ್ಯಾರಿ ಗಾರ್ಡಿನರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಲ್ಲು ಲಂಡನ್ ಪ್ರವಾಸದ ವೇಳೆ ಅವರನ್ನು ಭೇಟಿಯಾಗಿ ಮಾತನಾಡಿರುವ ಬಗ್ಗೆ ಬ್ಯಾರಿ ಗಾರ್ಡಿನರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಬ್ರೆಂಟ್ ನಾರ್ತ್ ಕ್ಷೇತ್ರದ ಯುಕೆ ಸಂಸದ ಬ್ಯಾರಿ ಗಾರ್ಡಿನರ್ ಅವರನ್ನು ಭೇಟಿಯಾಗಿ ಸಾಕಷ್ಟು ವಿನೋದದ ಸಮಯವನ್ನು ಕಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿವೆ.

ಟ್ವಿಟರ್ ನಲ್ಲಿ ಖುದ್ದು ಬ್ಯಾರಿ ಗಾರ್ಡಿನರ್ ಅವರು ವೆಂಬ್ಲಿ ಸ್ಟೇಡಿಯಂನಲ್ಲಿ ಸಲ್ಮಾನ್ ಖಾನ್ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದು, “ಟೈಗರ್ ಜೀವಂತವಾಗಿದ್ದಾರೆ ಮತ್ತು ಲಂಡನ್‌ನಲ್ಲಿದ್ದಾರೆ. @BeingSalmanKhan ಅವರನ್ನು ಇಂದು ವೆಂಬ್ಲಿಗೆ ಸ್ವಾಗತಿಸಲು ಸಂತೋಷವಾಗಿದೆ” ಎಂದು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ಅವರ ಅಭಿಮಾನಿಗಳು, ಸಿನಿಮಾ ರಂಗದವರು ಸೇರಿದಂತೆ ಸಲ್ಮಾನ್ ಅವರ ಕುಟುಂಬದವರೆಗೆ ಆಘಾತವನ್ನುಂಟು ಮಾಡಿದೆ.

ಗುಂಡು ಹಾರಿಸಿದ ಆರೋಪಿಗಳ ಬಂಧನದ ನಂತರ ಕಛ್ ಡಿಎಸ್ಪಿ ಎಆರ್ ಝಾಂಕಾಂತ್ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿಸಿದರು.

ಗಮನಾರ್ಹವಾಗಿ, ನವೆಂಬರ್ 2022 ರಿಂದ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಬೆದರಿಕೆಗಳ ನಂತರ ಸಲ್ಮಾನ್ ಅವರ ಭದ್ರತೆಯನ್ನು ವೈ-ಪ್ಲಸ್‌ಗೆ ಹೆಚ್ಚಿಸಲಾಗಿದೆ.

https://twitter.com/BarryGardiner/status/1784978800452743545?ref_src=twsrc%5Etfw%7Ctwcamp%5Etweetembed%7Ctwterm%5E1784978800452743545%7Ctwgr%5Ecca5c2384d8bcadae34fb3e4fe8e60216853daa4%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fsalman-khans-photos-with-uk-mp-barry-gardiner-go-viral-latter-says-tiger-is-alive-hes-in-london

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read