ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಮಾನ್ ಖಾನ್…! ಹಳೆ ವಿಡಿಯೋ ಮತ್ತೆ ವೈರಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಲೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಹೀಗಾಗಿ ಅವರನ್ನು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಹೇಳಲಾಗುತ್ತದಾದರೂ ಮದುವೆ ವಯಸ್ಸು ಈಗಾಗಲೇ ದಾಟಿರುವ ಕಾರಣ ಈಗ ಇವರನ್ನು ಯಾರು ವಿವಾಹವಾಗುತ್ತಾರೆ ಎಂದು ಹಲವರು ಹೇಳುತ್ತಾರೆ.

ಚಿತ್ರರಂಗದ ಆರಂಭದ ದಿನಗಳಿಂದಲೂ ಹಲವು ನಟಿಯರೊಂದಿಗೆ ಸಲ್ಮಾನ್ ಖಾನ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಇದ್ಯಾವುದೂ ವಿವಾಹದಲ್ಲಿ ಕೊನೆಗೊಂಡಿಲ್ಲ. ಇದೀಗ ವಿವಾಹದ ಕುರಿತಂತೆ ಸಲ್ಮಾನ್ ಖಾನ್ ಮಾತನಾಡಿರುವ ಹಳೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿರುವ ಸಲ್ಮಾನ್ ಖಾನ್, ತಾವು ನಟಿ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದೆ ಎಂದಿದ್ದಾರೆ. ಜೂಹಿ ಚಾವ್ಲಾ ತಂದೆಯ ಬಳಿಯೂ ಸಲ್ಮಾನ್ ಖಾನ್ ವಿವಾಹದ ಪ್ರಸ್ತಾಪವನ್ನು ಇಟ್ಟಿದ್ದರಂತೆ. ಆದರೆ ಇದಕ್ಕೆ ಜೂಹಿ ಚಾವ್ಲಾ ತಂದೆ ನಯವಾಗಿಯೇ ನಿರಾಕರಿಸಿದ್ದರಂತೆ.

ಆ ಬಳಿಕ ಜೂಹಿ ಚಾವ್ಲಾ ಉದ್ಯಮಿ ಜೈ ಮೆಹ್ತಾ ಅವರೊಂದಿಗೆ ಮದುವೆಯಾಗಿದ್ದು, ಸಲ್ಮಾನ್ ಖಾನ್ ಜೊತೆ ‘ದಿವಾನ ಮಸ್ತಾನ’ ಚಿತ್ರದಲ್ಲಿ ಜುಹಿ ಚಾವ್ಲಾ ನಟಿಸಿದ್ದರು. ಈ ಚಿತ್ರದಲ್ಲಿ ಅನಿಲ್ ಕಪೂರ್ ಹಾಗೂ ಗೋವಿಂದ ಸಹ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿಯೂ ಜೂಹಿ ಕಾಣಿಸಿಕೊಂಡಿದ್ದರು.

https://twitter.com/Arshi_E_Sid/status/1634305499595444226?ref_src=twsrc%5Etfw%7Ctwcamp%5Etweetembed%7Ctwterm%5E1634305499595444226%7Ctwgr%5E3f0c3c8cd39a5c137d9ba373241a91fce18266a3%7Ctwcon%5Es1_&ref_url=https%3A%2F%2Fwww.news18.com%2Fmovies%2Fsalman-khan-wanted-to-marry-juhi-chawla-had-sent-wedding-proposal-to-her-father-but-7287577.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read