ಸಲ್ಮಾನ್‌ ನನ್ನ ಮೇಲೆ ಮದ್ಯ ಸುರಿದಿದ್ದ; ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ….!

ಪಾಕಿಸ್ತಾನಿ ನಟಿ ಸೋಮಿ ಅಲಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್‌ಖಾನ್‌ ಒಂದು ಕಾಲದಲ್ಲಿ ಅಮರ ಪ್ರೇಮಿಗಳಂತೆ ಇದ್ದವರು. ಈಗ ಅದೇ ನಟಿ ಸೋಮಿ ಅಲಿ, ನಟ ಸಲ್ಮಾನ್ ಖಾನ್ ವಿರುದ್ಧ ಒಂದಿಲ್ಲ ಒಂದು ಅಚ್ಚರಿಯ ಹೇಳಿಕೆಗಳನ್ನ ಕೊಟ್ಟು ಸುದ್ದಿಯಲ್ಲಿ ಇರುವುದೇ ಹೆಚ್ಚು.

ಇತ್ತೀಚೆಗೆ ಸಲ್ಮಾನ್‌ ಖಾನ್‌ ನ ಮಾಜಿ ಪ್ರೇಯಸಿ ಸೋಮಿ ಅಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಆದರೆ ಆ ಪೋಸ್ಟ್ ಕೆಲವೇ ನಿಮಿಷಗಳ ನಂತರ ಡಿಲೀಟ್ ಮಾಡಲಾಗಿತ್ತು. ಆ ಪೋಸ್ಟ್‌ನ್ನ ತಾನು ಡಿಲೀಟ್ ಮಾಡಿಲ್ಲ, ಬೇರೆ ಯಾರೋ ಮಾಡಿದ್ದಾರೆ, ನನ್ನ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ನಟಿ ಸೋಮಿ ಅಲಿ ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ನಟಿ ಸೋಮಿ ಅಲಿ, ನಟ ಸಲ್ಮಾನ್‌ ಖಾನ್‌ ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವುದರ ಕುರಿತು ಹೇಳಿಕೆಯನ್ನ ಕೊಟ್ಟಿದ್ದರು. ಅಷ್ಟೆ ಅಲ್ಲ ನಟಿ ಸಂಗೀತಾ ಬಿಜಲಾನಿ ಹಾಗೂ ಐಶ್ವರ್ಯ ರೈ, ನಟ ಸಲ್ಮಾನ್ ಜೊತೆ ರಿಲೇಶನ್‌ಶಿಪ್‌ನಲ್ಲಿ ಇದ್ದಾಗ ಅನುಭವಿಸಿರುವ ನರಕಯಾತನೆಯನ್ನ ಕೂಡ ವಿವರಿಸಿದ್ದರು. ‌

ಇದೇ ಕಾರಣಕ್ಕೆ ಆ ಇಬ್ಬರು, ನಟಿ ಸಲ್ಮಾನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು ಎಂದು ಆ ಇಂಟರ್‌ವ್ಯೂನಲ್ಲಿ ಹೇಳಿದ್ದಾರೆ. ಇಷ್ಟೆಲ್ಲ ಆಗಿದ್ದರೂ ನಟಿ ಸೋಮಿ ಅಲಿ, ಸಲ್ಮಾನ್‌ಖಾನ್‌ಗೆ ಮದುವೆ ಆಗುವುದಕ್ಕೆ ಬಯಸಿದ್ದರು. ಕಾರಣ ಆಗ ಅವರು ನಟ ಸಲ್ಮಾನ್‌ ಖಾನ್‌ ರನ್ನ ಮನಸಾರೆ ಪ್ರೀತಿಸಿದ್ದರು.

ಇನ್ನು ಅದೇ ಇಂಟರ್‌ವ್ಯೂನಲ್ಲಿ ಈಕೆ ಈ ಹಿಂದೆ ತನಗಾಗಿರುವ ಕಹಿ ಘಟನೆಯನ್ನ ಕೂಡ ಹೇಳಿದ್ದಾರೆ. ’ ನಾನು ಮತ್ತು ನಟಿ ಮನೀಷಾ ಕೊಯಿರಾಲಾ ಒಂದು ದಿನ ಕುಡಿಯುತ್ತಿದ್ದೇವು. ಅಲ್ಲಿಗೆ ಬಂದ ಸಲ್ಮಾನ್ ಏನು ಕುಡಿಯುತ್ತಿದ್ದಿರಾ ಎಂದು ಕೇಳಿದ. ನಾನು ಥಮ್ಸ್ಅಪ್ ಎಂದು ಹೇಳಿದೆ. ಅಸಲಿಗೆ ಆ ಗ್ಲಾಸ್‌ನಲ್ಲಿ ರಮ್ ಇತ್ತು. ಇದು ಸಲ್ಮಾನ್‌ಗೆ ಗೊತ್ತಾಗ್ತಿದ್ದ ಹಾಗೆಯೇ ಆ ಗ್ಲಾಸ್‌ ನಲ್ಲಿದ್ದ ಮದ್ಯವನ್ನು ನನ್ನ ತಲೆ ಮೇಲೆಯೇ ಸುರಿದಿದ್ದ. ಸಲ್ಮಾನ್‌ ಈ ವರ್ತನೆ ನೋಡಿ ನಟಿ ಮನೀಷಾ ಕೊಯಿರಾಲಾ ಕೆಂಡಾಮಂಡಲವಾಗುತ್ತಾರೆ. ಮಹಿಳೆಯರ ಜೊತೆ ಹೀಗೆ ವರ್ತಿಸಿದ್ದು ಸರಿಯೇ ಎಂದು ಸಲ್ಮಾನ್‌ಖಾನ್‌ಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆ ಸಮಯದಲ್ಲೂ ನಾನು ಸಲ್ಮಾನ್ ಪರ ವಹಿಸಿ ಮಾತನಾಡಿದ್ದೆ. ಇದೇ ಕಾರಣಕ್ಕೆ ನಟಿ ಮನೀಷಾ ಹಾಗೂ ನನ್ನ ಗೆಳೆತನವೂ ಅಂತ್ಯವಾಯಿತು ಎಂದಿದ್ದಾರೆ.

ನಟ ಸಲ್ಮಾನ್ ಖಾನ್ ಬಗ್ಗೆ ಒಂದಾದ ಮೇಲೆ ಒಂದು ದೂರುಗಳನ್ನ ಹೇಳುವ ಪಾಕ್ ನಟಿ ಸೋಮಿ ಅಲಿ, ಸಲ್ಮಾನ್‌ಖಾನ್‌ನ ಉದಾರತೆಯನ್ನ ಹೊಗಳುವುದನ್ನ ಮರೆಯುವುದಿಲ್ಲ. ಹಾಸ್ಯ ಕಲಾವಿದ ಕಪಿಲ್ ಶರ್ಮಾ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಸೆಟ್ ಪೂರ್ತಿ ಬೆಂಕಿಗೆ ಆಹುತಿ ಆಗಿತ್ತು. ಆ ಸಮಯದಲ್ಲಿ ನಟ ಸಲ್ಮಾನ್‌ ಖಾನ್‌ ಆರ್ಥಿಕವಾಗಿ ಆತನಿಗೆ ಸಹಾಯ ಮಾಡಿದ್ದರು ಎಂದು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read