ಬೆದರಿಕೆ ಕರೆ ಬೆನ್ನಲ್ಲೇ ನಿಸ್ಸಾನ್‌‌ ನ ಬುಲೆಟ್‌ ಪ್ರೂಫ್ ಎಸ್‌ಯುವಿ‌ ಖರೀದಿಸಿದ ಸಲ್ಮಾನ್ ಖಾನ್

ಈ ಸೆಲೆಬ್ರಿಟಿಗಳ ಜೀವನವೇ ಹಾಗೆ. ಅವರು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಪ್ರತಿನಿತ್ಯ ಸುದ್ದಿಯಲ್ಲೇ ಇರುತ್ತಾರೆ. ನಟ/ನಟಿಯರು, ಕ್ರಿಕೆಟರುಗಳು ಖರೀದಿ ಮಾಡುವ ಕಾರುಗಳೂ ಸಹ ಅವರಂತೆಯೇ ಸುದ್ದಿ ಮಾಡುತ್ತವೆ.

ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ ಒಂದನ್ನು ಖರೀದಿ ಮಾಡಿರುವ ವಿಚಾರ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಣಭೀತಿಯ ಕರೆಗಳು ಹೆಚ್ಚಾದ ಕಾರಣ ಸಲ್ಮಾನ್ ಖಾನ್‌, ಹೆಚ್ಚಿನ ರಕ್ಷಾ ಕವಚ ನೀಡುವ ಈ ಕಾರನ್ನು ಖರೀದಿ ಮಾಡಿದ್ದಾರೆ.

ಸುತ್ತಲೂ ಬುಲೆಟ್‌ಪ್ರೂಫ್ ಗಾಜುಗಳನ್ನು ಹೊಂದಿರುವ ಈ ಕಾರು, ಡೋರ್‌ ಸ್ಟಾಪರ್‌ಗಳು ಹಾಗೂ ಇಂಧನ ಟ್ಯಾಂಕರ್‌ಗೆ ಹೆಚ್ಚಿನ ಸುರಕ್ಷತೆಯನ್ನು ಸಹ ಹೊಂದಿದೆ. ಸ್ನೈಪರ್‌ ರೈಫಲ್‌ಗಳಿಂದ ಸಿಡಿದ ಗುಂಡುಗಳಿಂದಲೂ ಸಹ ಈ ಕಾರು ತಮ್ಮೊಳಗೆ ಕುಳಿತ ಪ್ರಯಾಣಿಕರನ್ನು ಕಾಪಾಡಬಲ್ಲವು.

ಸದ್ಯಕ್ಕೆ ಭಾರತದಲ್ಲಿ ನಿಸ್ಸಾನ್ ಪೆಟ್ರೋಲ್ ಲಭ್ಯವಿಲ್ಲ. 4.0 ಲೀಟರ್‌ ವಿ6 ಇಂಜಿನ್‌ ಮೂಲಕ 279 ಪಿಎಸ್‌ ಮತ್ತು 394 ಎನ್‌ಎಂ ಶಕ್ತಿಯನ್ನು ಪಡೆಯುವ ಪೆಟ್ರೋಲ್ ವರ್ಶನ್ ಹಾಗೂ 5.6ಲೀ ವಿ8 ಘಟಕದೊಂದಿಗೆ 406 ಪಿಎ‌ಸ್‌ ಶಕ್ತಿಯನ್ನು ಉತ್ಪಾದಿಸಬಲ್ಲ ಡೀಸೆಲ್ ವರ್ಶನ್‌ನ ನಿಸ್ಸಾನ್ ಪೆಟ್ರೋಲ್‌ಗಳು ಇವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read