ಸಿಗರೇಟ್ ಸೇದುತ್ತಲೇ ಕಾರ್ಯಕ್ರಮ ನಡೆಸಿಕೊಟ್ರಾ ಸಲ್ಮಾನ್ ಖಾನ್ ? ವೈರಲ್‌ ಆಗಿದೆ ʼಬಿಗ್ ಬಾಸ್ʼ ವಿಡಿಯೋ

ಜನಪ್ರಿಯ ʼಬಿಗ್ ಬಾಸ್ʼ ಓಟಿಟಿ ಸೀಸನ್ 2 ನಡೆಸಿಕೊಡುತ್ತಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ವೇದಿಕೆಯಲ್ಲಿ ಕಾಣಿಸಿಕೊಂಡ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಜೂನ್ 17 ರಂದು ಶುರುವಾದ ಬಿಗ್ ಬಾಸ್ ಓಟಿಟಿ ಸೀಸನ್ 2 ಗಮನ ಸೆಳೆಯುತ್ತಿದೆ. ಇತ್ತೀಚಿಗೆ ನಡೆದ ʼವೀಕೆಂಡ್ ಕಾ ವಾರ್ʼ ನಲ್ಲಿ ಸ್ಟಾರ್ ನಿರೂಪಕ ಸಲ್ಮಾನ್ ಖಾನ್ ಕೈಯಲ್ಲಿ ಕಾಣಿಸಿಕೊಂಡ ಸಿಗರೇಟ್ ನಿಂದಾಗಿ ವೀಕ್ಷಕರು ಅಚ್ಚರಿಯ ಜೊತೆಗೆ ಸಲ್ಲು ನಡೆಯನ್ನ ಟೀಕಿಸಿದ್ದಾರೆ.

ಸ್ಪರ್ಧಿಗಳ ನಡೆ, ತಪ್ಪುಗಳನ್ನ ಟೀಕಿಸುವ ನಿರೂಪಕ ಸಲ್ಮಾನ್ ಖಾನ್ ಲೈವ್ ಶೋನಲ್ಲೇ ಕೈಯಲ್ಲಿ ಸಿಗರೇಟ್ ಹಿಡಿದು ಕಾಣಿಸಿಕೊಂಡಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಣಿಕೊಂಡಿವೆ.

ಪ್ರತಿಷ್ಠಿತ ಚಾನೆಲ್ ನಲ್ಲಿ ಕಾರ್ಯಕ್ರಮ ನಡೆಸಿಕೊಡುವಾಗ್ಲೇ ಸಲ್ಮಾನ್ ಖಾನ್ ಸಿಗರೇಟ್ ಸೇದಿದ್ದಾರೆ. ಸ್ಪರ್ಧಿಗಳಿಗೆ ಬುದ್ಧಿ ಹೇಳುವ ಈ ನಿರೂಪಕರದ್ದು ಇದೆಂಥಾ ಬುದ್ಧಿ ಎಂದು ಟೀಕಿಸಿದ್ದಾರೆ. ಸಲ್ಲು ಸಿಗರೇಟ್ ಹಿಡಿದು ನಿಂತಿರುವ ಫೋಟೋಗಳನ್ನು ಹಂಚಿಕೊಂಡಿರುವ ನೆಟ್ಟಿಗರು ವಾಹಿನಿ ಇದನ್ನು ಕಟ್ ಮಾಡದೇ ಪ್ರಸಾರ ಮಾಡಿದೆ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೇ ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿ ಸಂಭಾಷಣೆ ವೇಳೆ F- ಪದ ಬಳಸಿದ್ದಾರೆ ಎಂಬುದು ಕೂಡ ಭಾರೀ ಸುದ್ದಿಯಾಗಿದೆ. ಸ್ಪರ್ಧಿಗಳೊಂದಿಗಿನ ಸಂಭಾಷಣೆ ವೇಳೆ F- ಪದಬಳಕೆಯಿಂದ ಸಲ್ಮಾನ್ ಖಾನ್ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೂನ್ 17 ರಿಂದ ಬಿಗ್ ಬಾಸ್ OTT 2 ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

Salman smoking on national television.
by inBollyBlindsNGossip

https://twitter.com/Jatindodi01/status/1677826947693543424?ref_src=twsrc%5Etfw%7Ctwcamp%5Etweetembed%7Ctwterm%5E1677826947693543424%7Ctwgr%5E647a3c82b561bb5a416f9b02217bc7b6656fc68c%7Ctwcon%5Es1_&ref_url=https%3A%2F%2Fwww.indiatoday.in%2Fbinge-watch%2Fstory%2Fwatch-salman-khan-holds-a-cigarette-on-bigg-boss-ott-2-stage-uses-f-word-2404227-2023-07-10

https://twitter.com/SonuKum614/status/1678103271788126210?ref_src=twsrc%5Etfw%7Ctwcamp%5Etweetembed%7Ctwterm%5E1678103271788126210%7Ctwgr%5E647a3c82b561bb5a416f9b02217bc7b6656fc68c%7Ctwcon%5Es1_&ref_url=https%3A%2F%2Fwww.indiatoday.in%2Fbinge-watch%2Fstory%2Fwatch-salman-khan-holds-a-cigarette-on-bigg-boss-ott-2-stage-uses-f-word-2404227-2023-07-10

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read