ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು, ನೌಕರರು ವಿವಿಧ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಸಂಬಳ ಪ್ಯಾಕೇಜ್ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಸಂಬಳ ಪ್ಯಾಕೇಜ್ ಅಡಿಯಲ್ಲಿ ಖಾತೆ ಹೊಂದಿದ ನೌಕರರಿಗೆ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲ, ಉಚಿತ ರೂಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಉಚಿತ ಡಿಡಿ, ರಿಯಾಯಿತಿ ದರದಲ್ಲಿ ಲಾಕರ್ ಸೇವೆ ಒದಗಿಸುತ್ತವೆ.
ಇದರೊಂದಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, 456 ರೂಪಾಯಿಗೆ ಎರಡು ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ ಒದಗಿಸಲಾಗುವುದು. ಅಲ್ಲದೆ, ಈ ಖಾತೆಗಳಿಗೆ ಮತ್ತಷ್ಟು ಅನುಕೂಲಗಳಿದ್ದು, ಈ ಅನುಕೂಲಗಳನ್ನು ಸರ್ಕಾರಿ ನೌಕರರು ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರೂ ಅನೇಕರು ಸಂಬಳ ಪ್ಯಾಕೇಜ್ ಖಾತೆ ತೆರೆದಿಲ್ಲ. ಹೀಗಾಗಿ ಎಲ್ಲಾ ಸರ್ಕಾರಿ ನೌಕರರು ಮೂರು ತಿಂಗಳೊಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯುವಂತೆ ತಿಳಿಸಲಾಗಿದೆ.