ಸಕ್ರೆಬೈಲಿನಲ್ಲಿ ಆನೆ ಮರಿ ದುರಂತ ಸಾವು: ತಾಯಿ ಹಾಲು ಕೊಡದಿದ್ದಕ್ಕೆ ಬಲಿ

ಶಿವಮೊಗ್ಗದ ಸಕ್ರೆಬೈಲಲ್ಲಿ ಒಂದು ನೋವಿನ ಸಂಗತಿ ನಡೆದಿದೆ. ನಾಲ್ಕು ದಿನದ ಹಿಂದೆ ಹುಟ್ಟಿದ ಆನೆ ಮರಿ ಸಾವನ್ನಪ್ಪಿದ್ದು, ತಾಯಿ ಆನೆ ಹಾಲು ಕೊಡದಿದ್ದಕ್ಕೆ, ಬಿಸಿಲಲ್ಲಿ ಬಳಲಿ ಸಾವೀಗಿಡಾಗಿದೆ ಅಂತ ಹೇಳಲಾಗ್ತಿದೆ.

11 ವರ್ಷದ ಹೇಮಾವತಿ ಅನ್ನೋ ಆನೆ, ಮರಿ ಹಾಕಿತ್ತು. ಆದ್ರೆ, ಮರಿಗೆ ಹಾಲು ಕುಡಿಸಲಿಲ್ಲ. ಸಿಬ್ಬಂದಿ ಎಷ್ಟೇ ಟ್ರೈ ಮಾಡಿದ್ರೂ, ಅದು ಹಾಲು ಕುಡಿಯೋಕೆ ಬಿಡಲಿಲ್ಲ. ಬಾಟಲಿಯಲ್ಲಿ ಹಾಲು ಕೊಟ್ರೂ ಪ್ರಯೋಜನ ಆಗಲಿಲ್ಲ. ಬಿಸಿಲಿನ ಬಿಸಿಗೂ ಮರಿ ತಡ್ಕೊಳ್ಳೋಕೆ ಆಗಲಿಲ್ಲ.

ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ರಿಸಲ್ಟ್ ಬಂದ್ಮೇಲೆ, ಯಾಕೆ ಸತ್ತುಹೋಯ್ತು ಅಂತ ಗೊತ್ತಾಗುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ.

ಸಕ್ರೆಬೈಲು ಕ್ಯಾಂಪಿನಿಂದ ನೇತ್ರಾವತಿ, ಹೇಮಾವತಿ, ಮತ್ತೆ ನೇತ್ರಾವತಿಯ ಮರಿನೂ ಕಾಡಿಗೆ ಮೇಯೋಕೆ ಹೋಗಿದ್ವು. ಅವಾಗ ಒಂದು ಗಂಡಾನೆ ನೇತ್ರಾವತಿ ಜೊತೆ ಇತ್ತು. ಹೇಮಾವತಿನೂ ಅಲ್ಲೇ ಇತ್ತು. ಮರಿ ಹಾಕಿದ್ಮೇಲೆ, ಡಾಕ್ಟರ್, ಕಾವಾಡಿ, ಮಾವುತರು ಅವಳ ಹತ್ರ ಹೋದ್ರೆ, ಗಂಡಾನೆ ದಾಳಿ ಮಾಡೋಕೆ ಬರ್ತಿತ್ತು. ಅದಕ್ಕೆ ಸರಿಯಾಗಿ ಟ್ರೀಟ್ಮೆಂಟ್ ಕೊಡೋಕೆ ಆಗಲಿಲ್ಲ ಅಂತ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read