ಸಂತರು, ಮಹಾತ್ಮರು ಎಂದಿಗೂ ಅಧಿಕಾರಕ್ಕೆ ಗುಲಾಮರಾಗಲು ಸಾಧ್ಯವಿಲ್ಲ; ಯುಪಿ ಸಿಎಂ ಯೋಗಿ ಆದಿತ್ಯನಾಥ್

ಯಾವುದೇ ಸಂತ, ಮಹಾತ್ಮ ಅಥವಾ ಯೋಗಿ ಎಂದಿಗೂ ಅಧಿಕಾರದ ಹಸಿವಿನಿಂದ ಇರಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರಪ್ರದೇಶದ ಚಂದೌಲಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಸಂತರು ಮತ್ತು ಯೋಗಿಗಳ ಪಾತ್ರವು ಸಮಾಜವನ್ನು ಅವರ ಹಾದಿಯಲ್ಲಿ ಅನುಸರಿಸಲು ಪ್ರೇರೇಪಿಸುತ್ತದೆ ಎಂದರು.

“ಅದೇ ಸಮಯದಲ್ಲಿ ಸಂತರು ಮತ್ತು ಸನ್ಯಾಸಿಗಳ ಎಲ್ಲಾ ಸಾಧನೆಗಳು ಮತ್ತು ಧ್ಯಾನ ರಾಷ್ಟ್ರೀಯ ಹಿತಾಸಕ್ತಿ, ಸಾಮಾಜಿಕ ಹಿತಾಸಕ್ತಿ ಮತ್ತು ಮಾನವ ಕಲ್ಯಾಣದಲ್ಲಿದೆ. ಬಾಬಾ ಕೀನರಾಮ್ 425 ವರ್ಷಗಳ ಹಿಂದೆ ದಿವ್ಯ ಧ್ಯಾನದ ಮೂಲಕ ಎಲ್ಲರಿಗೂ ಅದೇ ಆದರ್ಶಗಳನ್ನು ಪ್ರಸ್ತುತಪಡಿಸಿದ್ದರು. ವಿದೇಶಿ ಆಕ್ರಮಣಕಾರರು ದೇಶ ಮತ್ತು ಸಮಾಜವನ್ನು ವಿಭಜಿಸುವಲ್ಲಿ ಯಶಸ್ವಿಯಾದ ಕಾರಣ ದೇಶವು ಗುಲಾಮವಾಯಿತು” ಎಂದು ಅಘೋರಾಚಾರ್ಯ ಬಾಬಾ ಕೀನರಾಮ್ ಅವರ ಜನ್ಮಸ್ಥಳದಲ್ಲಿ ಆಯೋಜಿಸಲಾದ ಅಘೋರಾಚಾರ್ಯ ಬಾಬಾ ಕೀನರಾಮ್ ರವರ 425 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಾಬಾ ಕೀನರಾಮ್ ಅವರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೀನರಾಮ್ ಜೀವನಗಾಥೆಯನ್ನು ಸ್ಮರಿಸಿದರು. ತಮ್ಮ ಶ್ರೀಮಂತ ವಂಶಾವಳಿಯ ಹೊರತಾಗಿಯೂ, ಬಾಬಾ ಕೀನರಾಮ್ ಅವರು ಬುಡಕಟ್ಟು ಸಮುದಾಯಗಳು ಮತ್ತು ಸ್ಥಳೀಯರ ಜೀವನವನ್ನು ಸುಧಾರಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಅವರು ಮೊಘಲ್ ಆಡಳಿತಗಾರರ ವಿರುದ್ಧ ವಿಶೇಷವಾಗಿ ಷಹಜಹಾನ್ ವಿರುದ್ಧ ನಿಂತರು ಎಂದರು.

ವಿಧವಾ ಪುನರ್ವಿವಾಹ, ಮಹಿಳಾ ಶಿಕ್ಷಣ, ಕುಷ್ಠ ರೋಗಿಗಳ ಆರೈಕೆ ಮತ್ತು ಬಡವರು ಮತ್ತು ತುಳಿತಕ್ಕೊಳಗಾದವರಿಗೆ ಬೆಂಬಲ ನೀಡುವಂತಹ ಪ್ರಯತ್ನಗಳು ಸೇರಿದಂತೆ ಬಾಬಾ ಕೀನಾರಾಮ್ ಅವರು ಪ್ರಾರಂಭಿಸಿದ ಸಮಾಜ ಸುಧಾರಣಾ ಉಪಕ್ರಮಗಳು ಅಘೋರ್ ಪೀಠದ ಮೂಲಕ ಇಂದಿಗೂ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read