BREAKING NEWS: ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ: ಬಂಧಿತ ಆರೋಪಿ ಬಾಂಗ್ಲಾ ಪ್ರಜೆ: ಅಕ್ರಮವಾಗಿ ಭಾರತಕ್ಕೆ ಎಂಟ್ರಿ ಕೊಟ್ಟು ಕೃತ್ಯ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸತತ 70 ಗಂಟೆ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ವಿಜಯ್ ದಾಸ್ ಅಲಿಯಾಸ್ ಮೊಹಮ್ಮದ್ ಬಂಧಿತ ಆರೋಪಿ. ಈತ ಬಾಂಗ್ಲಾ ಮೂಲದವನು ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಪೊದೆಗಳಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಡಿಸಿಪಿ ದೀಕ್ಷಿತ್ ಗೆಡಮ್ , ಬಂಧಿತ ಆರೋಪಿ ವಿಜಯ್ ದಾಸ್ ಬಾಂಗ್ಲಾ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ. ಇದೇ ಕಾರಣಕ್ಕೆ ಆತ ಪದೇ ಪದೇ ಹೆಸರನ್ನು ಬದಲಿಸಿಕೊಳ್ಳುತ್ತಿದ್ದ. ಕಳೆದ 6-7 ತಿಂಗಳಿಂದ ಮುಂಬೈನ ವಿವಿಧ ಟೌನ್ ಗಳಲ್ಲಿ ವಾಸವಾಗಿದ್ದ. ಈಗ 15 ದಿನಗಳಿಂದ ಆತ ಮುಂಬೈ ನಗರದಲ್ಲಿ ವಾಸವಾಗಿದ್ದ. ಹೌಸ್ ಕೀಪಿಂಗ್ ಏಜೆನ್ಸಿಯಲ್ಲಿ ವಿಜಯ್ ದಾಸ್ ಕೆಲಸ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read