Video: ಸನ್‌ ರೂಫ್ ಮೂಲಕ ಪಟಾಕಿ ಸಿಡಿತ; ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾದ ಕಾರು

ಯುವಕರಿಬ್ಬರು ಅಜಾಗರೂಕತೆಯಿಂದ ಸನ್‌ರೂಫ್ ಮೂಲಕ ಪಟಾಕಿ ಸಿಡಿಸಿದ್ದು, ಇದರ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಪ್ರದೇಶದಲ್ಲಿ ನಡೆದಿದೆ.

ಮದುವೆ ಸಮಾರಂಭದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿದ್ದು, ಸುರಕ್ಷಿತವಾಗಿ ಪಟಾಕಿ ಹೊತ್ತಿಸುವ ಬದಲು, ಇಬ್ಬರು ಯುವಕರು ತಮ್ಮ ಕಾರಿನ ಸನ್‌ರೂಫ್‌ನಿಂದ ಅವುಗಳನ್ನು ಸಿಡಿಸಿದ್ದಾರೆ.

ಈ ವೇಳೆ ಪಟಾಕಿಗಳಿಂದ ಸಿಡಿದ ಕಿಡಿ ಕಾರಿನೊಳಗಡೆಯೇ ಬಿದ್ದಿದ್ದು, ಇದರ ಪರಿಣಾಮ ಒಳಗಿದ್ದ ಪಟಾಕಿ ಪೆಟ್ಟಿಗೆಗಳು ಸಿಡಿಯಲು ಆರಂಭಿಸಿವೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಈ ಅಗ್ನಿ ಅವಘಡದ ಆಘಾತಕಾರಿ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ಗಂಡ್ವೇಡ ಗ್ರಾಮದ ನಿವಾಸಿಯೊಬ್ಬರ ಮದುವೆ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು, ಮದುವೆ ತಂಡ ಡೆಹ್ರಾಡೂನ್‌ಗೆ ಹೊರಡಲು ಸಿದ್ದತೆ ನಡೆಸಿತ್ತು ಎನ್ನಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read