ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಸಾಗರದ ಡಾ.ಚಿನ್ಮಯಿ ವಿ ಕೆ ಆಯ್ಕೆ…!

ದೆಹಲಿಯಲ್ಲಿ ನಾಳೆ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಸಾಗರದ ಮಾರ್ಕೆಟ್ ರಸ್ತೆಯಲ್ಲಿರುವ ಸಾಗರ ಡೀಸೆಲ್ಸ್ ನ ಮಾಲೀಕರಾದ ಶ್ರೀ ವಿನಾಯಕ ಖಟಾವಕರ ಮತ್ತು ಶ್ರೀಮತಿ ಸುನೀತಾ ರವರ ಪುತ್ರಿ ಡಾ. ಚಿನ್ಮಯಿ ವಿ ಕೆ ರವರು ವಿಶೇಷ ಅತಿಥಿಯಾಗಿ ಆಯ್ಕೆಗೊಂಡಿದ್ದಾರೆ.

“ಚಿನ್ಮಯಿ” ಯವರು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು. 2023-24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಇವರ ಮೇರಿ ಮಾತಿ ಮೇರಾ ದೇಶ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಾಗಿ ಭಾಗವಹಿಸಿದ್ದು,  ಅಲ್ಲಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅಧಾರದ ಮೇಲೆ ವಿಶೇಷ ಅತಿಥಿಯಾಗಿ ಆಯ್ಕೆಯಾಗಿದ್ದಾರೆ.

ಭಾರತಾದ್ಯಂತ ಕೇವಲ 200 ಜನರನ್ನು ಮತ್ತು ಅದರಲ್ಲೂ ಕರ್ನಾಟಕದಿಂದ ಕೇವಲ 22 ಜನರನ್ನು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆ ಪಟ್ಟಿಯಲ್ಲಿ ಸಾಗರದ “ಚಿನ್ಮಯಿ ವಿ ಕೆ” ಕಾಣಿಸಿಕೊಂಡಿರುವುದು ಹೆಮ್ಮೆಯ ವಿಚಾರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read