‘ಮೇಡ್ ಇನ್ ಬಿಹಾರ್’ ಶೂನಲ್ಲಿ ರಷ್ಯಾ ಸೈನಿಕರ ಫೈಟ್; ವೈರಲ್ ಆಗಿದೆ ಫೋಟೋ….!

ರಷ್ಯಾದ ಸೈನ್ಯವು ‘ಮೇಡ್ ಇನ್ ಬಿಹಾರ’ ಶೂಗಳಿಂದ ಪ್ರಭಾವಿತವಾಗಿದೆ. ಉಕ್ರೇನ್ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೇನೆಯು ಹಾಜಿಪುರದಲ್ಲಿ ತಯಾರಾದ ಈ ಶೂಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದೆ.

ಬಿಹಾರದ ಹಾಜಿಪುರ ನಗರ ರಷ್ಯಾ ಸೇನೆಗೆ ಪಾದರಕ್ಷೆಗಳನ್ನು ತಯಾರಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸುತ್ತಿದೆ. ಹಾಜಿಪುರ ಮೂಲದ ಕಂಪನಿ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ರಷ್ಯಾಕ್ಕೆ ಸುರಕ್ಷತಾ ಬೂಟುಗಳನ್ನು ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಮಾರಾಟ ಮಾಡುತ್ತಿದೆ, ಪ್ರಸ್ತುತ ಅವರು ರಷ್ಯಾದ ಸೈನ್ಯಕ್ಕೆ ಶೂಗಳನ್ನು ಪೂರೈಸುತ್ತಿದ್ದಾರೆ.

2018 ರಲ್ಲಿ ಹಾಜಿಪುರ ಘಟಕವನ್ನು ಪ್ರಾರಂಭಿಸಲಾಗಿದೆ. ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದು ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಶಿವ ಕುಮಾರ್ ರಾಯ್ ಹೇಳಿದ್ದಾರೆ. ಹಾಜಿಪುರದಲ್ಲಿ  ರಷ್ಯಾಕ್ಕೆ ರಫ್ತು ಮಾಡಲು ಸುರಕ್ಷತಾ ಬೂಟುಗಳನ್ನು ತಯಾರಿಸಲಾಗುತ್ತದೆ. ಸಂಪೂರ್ಣ ರಫ್ತು ರಷ್ಯಾಕ್ಕೆ ಮಾತ್ರ ಸೀಮಿತವಾಗಿದೆ.

ರಷ್ಯಾದ ಸೈನ್ಯಕ್ಕೆ ಅನುಕೂಲವಾಗುವಂತೆ ಈ ಬೂಟ್‌ ತಯಾರಿಸಲಾಗುತ್ತಿದೆ. ಕಡಿಮೆ ತೂಕ ಮತ್ತು ಆಂಟಿ-ಸ್ಲಿಪ್ ಹೊಂದಿರುವ ಬೂಟ್‌ ಅಡಿಭಾಗಗಳು ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಮೈನಸ್ 40 ಡಿಗ್ರಿ ಸೆಲ್ಸಿಯಸ್ ವರೆಗಿನ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ. ಕಳೆದ ವರ್ಷ ಕಂಪನಿ 100 ಕೋಟಿ ಮೌಲ್ಯದ 1.5 ಮಿಲಿಯನ್ ಜೋಡಿ ಶೂಗಳನ್ನು ರಫ್ತು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read