ಮಾಸ್ಕೋ: ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇಕಡ 50ರಷ್ಟು ತೆರಿಗೆ ಹೇರಿಕೆ ಮಾಡಿದ್ದಾರೆ.
ಇದರ ನಡುವೆ ರಷ್ಯಾ ಭಾರತಕ್ಕೆ ತೈಲ ದರದಲ್ಲಿ ಮತ್ತಷ್ಟು ರಿಯಾಯಿತಿ ನೀಡಿದೆ. ತೈಲ ಖರೀದಿಯ ಮೇಲೆ ಇದುವರೆಗೂ ನೀಡುತ್ತಿದ್ದ 2.5 ಡಾಲರ್ ನಷ್ಟು ರಿಯಾಯಿತಿಯನ್ನು 3-4 ಡಾಲರ್ ನಷ್ಟು ಏರಿಕೆ ಮಾಡಲಾಗಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭೇಟಿಯಾದ ಬಳಿಕ ತೈಲ ದರದಲ್ಲಿ ರಷ್ಯಾ ರಿಯಾಯಿತಿ ಘೋಷಿಸಿದೆ. ಈ ಮೂಲಕ ಟ್ರಂಪ್ ಅವರ ತೆರಿಗೆ ಏರಿಕೆಗೆ ನೇರವಾಗಿ ತಿರುಗೇಟು ನೀಡಲಾಗಿದೆ.
ಈ ಮೂಲಕ ಭಾರತೀಯ ತೈಲ ಕಂಪನಿಗಳಿಗೆ ಭಾರಿ ಲಾಭ ಮಾಡಿಕೊಡಲಿದೆ. ರಷ್ಯಾದ ಉರಲ್ ಕಂಪನಿಯು ಸೆಪ್ಟೆಂಬರ್ –ಅಕ್ಟೋಬರ್ ನಲ್ಲಿ ಲೋಡ್ ಮಾಡುವ ತೈಲಕ್ಕೆ ಈ ರಿಯಾಯಿತಿ ಅನ್ವಯವಾಗುತ್ತದೆ ಎನ್ನಲಾಗಿದೆ.