ರಷ್ಯಾ ದಂಗೆ: ಹೆದ್ದಾರಿಗಳ ಮೇಲಿನ ಎಲ್ಲಾ ನಿರ್ಬಂಧ ತೆರವು

ರಷ್ಯಾ ಆಂತರಿಕ ದಂಗೆ ವೇಳೆ ಹೆದ್ದಾರಿಗಳ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಸೇನೆ ಆಕ್ರಮಣ ಮುನ್ನಡೆಸಿದ ಖಾಸಗಿ ಸೈನ್ಯವಾದ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರು ಮಾಸ್ಕೋದಲ್ಲಿ ಮಿಲಿಟರಿ ನಾಯಕತ್ವವನ್ನು ಉರುಳಿಸಲು ಪ್ರತಿಜ್ಞೆ ಮಾಡಿದ್ದಾರೆ.

ತನ್ನ ಪಡೆಗಳು ‘ನಮ್ಮ ದಾರಿಯಲ್ಲಿ ನಿಂತಿರುವ ಎಲ್ಲವನ್ನೂ ನಾಶಮಾಡುತ್ತವೆ’ ಎಂದು ಹೇಳಿದ್ದು, ತನ್ನ ಪಡೆಗಳನ್ನು ವಿರೋಧಿಸುವುದರ ವಿರುದ್ಧ ರಷ್ಯನ್ನರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅವರೊಂದಿಗೆ ಕೈಜೋಡಿಸಲು ಕರೆ ನೀಡಿದ್ದು, “ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಮೆರವಣಿಗೆ” ಎಂದು ಹೇಳಿದ್ದಾರೆ.

ರಷ್ಯಾದ ಸೈನಿಕರು ಮಾಸ್ಕೋಗೆ ಪ್ರವೇಶಿಸುವ ಒಂದು ಹೆದ್ದಾರಿಯ ಅಂಚಿನಲ್ಲಿ ನಿಂತಿದ್ದಾರೆ. ಬಂಡುಕೋರ ವ್ಯಾಗ್ನರ್ ಕೂಲಿ ಪಡೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ರಕ್ತವನ್ನು ಚೆಲ್ಲಲು ಬಯಸುವುದಿಲ್ಲ. ಮಾಸ್ಕೋದಲ್ಲಿ ಮೆರವಣಿಗೆ ಮಾಡುವುದಾಗಿ ಹೇಳಿದ್ದಾರೆ.

ಪ್ರಿಗೊಝಿನ್ ಅವರ ಹೇಳಿಕೆಯ ನಂತರ ಮಾಸ್ಕೋದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಿರ್ಣಾಯಕ ಸೌಲಭ್ಯಗಳನ್ನು ‘ಬಲವರ್ಧಿತ ರಕ್ಷಣೆಯಲ್ಲಿ ಇರಿಸಲಾಗಿದೆ’. ರಷ್ಯಾ ಸರ್ಕಾರ ಮಾಸ್ಕೋದಲ್ಲಿ ‘ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಆಡಳಿತ’ವನ್ನು ಸಹ ಘೋಷಿಸಿದೆ. ರಷ್ಯಾದ ಪ್ರಮುಖ ಜನರಲ್, ‘ಶತ್ರುಗಳು ದೇಶದಲ್ಲಿ ಆಂತರಿಕ ರಾಜಕೀಯ ಪರಿಸ್ಥಿತಿ ಹದಗೆಡಲು ಕಾಯುತ್ತಿದ್ದಾರೆ’ ಎಂದು ಸುಳಿವು ನೀಡಿದ್ದಾರೆ.

ವ್ಯಾಗ್ನರ್ ಗುಂಪು ದೇಶದೊಳಗೆ ಹಗೆತನ ನಡೆಸುವ ಮೂಲಕ ರಷ್ಯಾಕ್ಕೆ ದ್ರೋಹ ಮಾಡಿದೆ ಎಂದು ಪುಟಿನ್ ಆರೋಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read