ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ಯಡಿ ಪಹಣಿ ಜತೆ ಪೋಟೋ, ಆಧಾರ್ ಜೋಡಣೆ ಕಡ್ಡಾಯ

ಬೆಂಗಳೂರು: ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ.

ಇದುವರೆಗೆ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ.

ಪಹಣಿಯಲ್ಲಿ ಸದ್ಯ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರಗಳೊಂದಿಗೆ ಸಂಗ್ರಹವಾಗಿರುತ್ತದೆ. ಒಂದೇ ಸರ್ವೇ ನಂಬರ್ ನ ಭೂಮಿಯನ್ನು ಸಹೋದರರು, ಸಹೋದರಿಯರು ಹಂಚಿಕೊಂಡಿದ್ದು, ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನ ವಾರಸುದಾರರು ಇರುತ್ತಾರೋ ಅಷ್ಟು ಮಂದಿ ಪ್ರತ್ಯೇಕವಾಗಿ ಆಧಾರ್ ಮತ್ತು ಫೋಟೋ ನೀಡುವುದು ಕಡ್ಡಾಯ.

ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. ನೋಂದಣಿ ಮಾಡುವಾಗ ರೈತರ ಖುದ್ದು ಫೋಟೋ ಕೇಳುತ್ತದೆ. ನಿಧನರಾಗಿದ್ದವರ ಮಾಹಿತಿ ಸಂಗ್ರಹಿಸುವುದಿಲ್ಲ. ಅನ್ಯ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ. ಕೃಷಿ ಭೂಮಿ ಮಾತ್ರ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ನಮೂದಿಸಲಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read