ಕಲಬುರಗಿ: ಕಲಬುರಗಿಯ ಚಿತ್ತಾಪುರದಲ್ಲಿ ಇಂದು ಆಯೋಜಿಸಿದ್ದ ಆರ್.ಎಸ್.ಎಸ್ ಪಥಸಂಚಲನಕ್ಕೆ ಅನುಮತ್ ನಿರಾಕರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಆರ್.ಎಸ್. ಮುಖಂಡರು ಕಲಬುರಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಹೈಕೋರ್ಟ್ ನ್ಯಾ. ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠದಲ್ಲಿ ತುರ್ತು ಅರ್ಜಿ ವಿಚಾರಣೆ ಆರಂಭವಾಗಿದೆ.
ಪಥಸಂಚಲನ, ಮೆರವಣಿಗೆಗೆ ಕಾನೂನು ಪ್ರಕಾರ ಅನುಮತಿ ಕೊಡಬೇದಾವರು ಯಾರು? ಪ್ರತಿಭಟನೆ ಮಾಡದೇ, ಘೋಷಣೆ ಕೂಗದೇ ಗುಂಪುಗೂಡಿ, ಮೆರವಣಿಗೆಯಲ್ಲಿ ಸಾಗಲು ಅನುಮತಿ ಅಗತ್ಯವೆ? ಯಾವ ಕಾನೂನಿನ ಅಡಿಯಲ್ಲಿ ಅನುಮತಿ ಕೊಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ. ಅರ್ಜಿದಾರರ ಪರವಕೀಲರು ಈ ಇಂತಹ ಪ್ರಕರಣಗಳಲ್ಲಿ ನಿರ್ಧಿಷ್ಟ ಕಾನೂನು ಇಲ್ಲ ಎಂದು ತಿಳಿಸಿದ್ದಾರೆ. ಅಪಥಸಂಚಲನದ ಅನುಮತಿ ಬಗ್ಗೆ ಕೋರ್ಟ್ ಯಾವ ರೀತಿ ಆದೇಶ ಹೊರಡಿಸಲಿದೆ ಕಾದುನೋಡಬೇಕಿದೆ.