ಮಂಗಳೂರು: ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಸೇವಾ ನಿವೃತ್ತಿ ಹೊಂದಿದ್ದ ವೃದ್ಧೆಯೊಬ್ಬರಿಗೆ ಮೂರು ಕೋಟಿ ರೂಪಾಯಿ ವಂಚಿಸಲಾಗಿದೆ.
ಸೈಬರ್ ವಂಚಕಿ ಕರೆ ಮಾಡಿ ಡ್ರಗ್ಸ್ ಪಾರ್ಸೆಲ್ ಹೆಸರಿನಲ್ಲಿ ಬೆದರಿಸಿದ್ದು 3.09 ಕೋಟಿ ರೂ. ವಂಚಿಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ದೂರು ದಾಖಲಾಗಿದೆ. ವಂಚನೆಗೆ ಒಳಗಾದ 72 ವರ್ಷದ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಜನವರಿ 15ರಂದು ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು. ನಂತರ ಆ ನಂಬರ್ ಗೆ ವಾಪಸ್ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮಹಿಳೆ, ನಾನು ಅಂಚೆ ಇಲಾಖೆ ನೌಕರಳಾಗಿದ್ದಾನೆ, ನೀವು ಚೀನಾಕ್ಕೆ ಕಳುಹಿಸಿದ್ದ ಪಾರ್ಸೆಲ್ ವಾಪಸ್ ಆಗಿದೆ. ಅದರಲ್ಲಿ 150 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ. ಈ ಪ್ರಕರಣದಲ್ಲಿ 75 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬೆದರಿಸಿದ್ದಾಳೆ.
ಆಕೆಯ ಮಾತು ನಂಬಿದ ವೃದ್ಧೆ ವಿವಿಧ ಬ್ಯಾಂಕ್ ಖಾತೆಗಳಿಗೆ ಜುಲೈ 4ರ ವರೆಗೆ ಒಟ್ಟು 3.09 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಅಪರಿಚಿತ ಮಹಿಳೆಯಿಂದ ಪ್ರತಿಕ್ರಿಯೆ ದೊರೆಯದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.